
ಆಹಾರ ಮತ್ತು ನೀರನ್ನು ಅರಸಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳ ಹಿಂಡೊಂದು ತೋಟದೊಳಗಿನ ಕೆರೆಗೆ ಬಿದ್ದು ಮೇಲೆ ಬರಲಾಗದೆ ಕೆರಯಲ್ಲೇ ಬಾಕಿಯಾಗಿರವ ಘಟನೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ.


ಅಜ್ಜಾವರ ಗ್ರಾಮದ ಇಲ್ಲಿನ ತುದಿಯಡ್ಕ ಎಂಬಲ್ಲಿನ ಸಂತೋಷ್ ಎಂಬವರ ತೋಟದಲ್ಲಿ ಈ ಘಟನೆ ನಡೆದಿದ್ದು, ಕೆರೆಗೆ ಬಿದ್ದ ಎರಡು ದೊಡ್ಡ ಮತ್ತೆರಡು ಮರಿಯಾನೆಗಳು ಮೇಲೆ ಬರಲಾಗದೇ ಒದ್ದಾಡುತ್ತಿದ್ದು ಆನೆಯನ್ನು ಮೇಲೆತರಿಸುವ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಸುಳ್ಯ ವಲಯ ಅರಣ್ಯಾಧಿಕಾರಿಗಳು ಬೇಟಿ ನೀಡಿದ್ದು, ಆನೆಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಕಾಡಿನಲ್ಲಿ ಆಹಾರ ನೀರು ಕಡಿಮೆಯಾದಾಗ ಅದನು ಅರಸಿ ಬರುವ ಪ್ರಾಣಿಗಳು ಕೆರೆ ನೀರಿನ ಆಳದ ಅಂದಾಜು ಇಲ್ಲದೆ ಬಿದ್ದು ಸಿಕ್ಕಿ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ,ಕೆರೆಗೆ ಬಿದ್ದ ಮರಿಯಾನೆ ರಕ್ಷಣೆಗೆ ದಾವಿಸಿದ ಹಿರಿಯಾನೆಗಳೂ ಕೆರೆಯಲ್ಲಿ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಅಜ್ಜಾವರ, ಆಲೆಟ್ಟಿ ಗ್ರಾಮಗಳಲ್ಲಿ ಆನೆಗಳ ಹಾವಳಿ ಜೋರಾಗಿದ್ದು, ಅಪಾರ ಪ್ರಮಾಣದ ಕೃಷಿನಾಶ ಅಗಾಗ ನಡೆಯುತ್ತಲೇ ಇರುತ್ತವೆ.
ಇದೀಗ ಅನೆ ಮೇಲೆತರಿಸಲು ಕಾರ್ಯಾಚರಣೆಯ ತಯಾರಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
