ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿ ಎಚ್.ಎಲ್. ವೆಂಕಟೇಶ್.

ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿ ಎಚ್.ಎಲ್. ವೆಂಕಟೇಶ್.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಅಭ್ಯರ್ಥಿಯಾಗಿ ಎಚ್ ಎಲ್ ವೆಂಕಟೇಶ್ ಹೆಸರು ಅಂತಿಮವಾಗಿದೆ ಎಂದು ತಿಳಿದು ಬಂದಿದೆ

ಸುಳ್ಯದ ಜೆಡಿಎಸ್ ಕಚೇರಿಯಲ್ಲಿ ಎ.5 ರಂದು ನಡೆದ ಸಭೆಯಲ್ಲಿ ಈ ನಿರ್ಣಯಕ್ಕೆ ಬರಲಾಗಿದೆ . ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಅಭ್ಯರ್ಥಿ ತನ ಬಯಸಿ ಸುಬ್ರಹ್ಮಣ್ಯದ ಅಗ್ರಹಾರ ದುಗ್ಗಪ್ಪ, ಸುಳ್ಯ ಜಟ್ಟಿಪಳ್ಳದ ಎಚ್.ಎಲ್.ವೆಂಕಟೇಶ್, ಸುಳ್ಯ ಜಯನಗರದ ಚೋಮ ಎನ್.ಬಿ. ಹಾಗೂ ಏನೆಕಲ್ ನ ಚಂದ್ರಶೇಖರರು ಸುಳ್ಯ ಅಕಾಂಕ್ಷಿಗಳಾಗಿದ್ದರು.ಅಂತಿಮವಾಗಿ ಸಭೆಯಲ್ಲಿ ಹೆಚ್ ಎಲ್ ವೆಂಕಟೇಶ ರವರನ್ನು ಅಭ್ಯರ್ಥಿತನಕ್ಕೆ ಘೋಷಣೆ ಮಾಡಲಾಯಿತು ಎಂದು ತಿಳಿದು ಬಂದಿದೆ.ಮತ್ತು
ಅರ್ಜಿ ಸಲ್ಲಿಸಿದ ಇತರ ಅಭ್ಯರ್ಥಿ ಗಳು ಒಗ್ಗಟ್ಟಾಗಿ
ಚುನಾವಣೆಯಲ್ಲಿ ಕೆಲಸ ಮಾಡಲು ಸಭೆಯಲ್ಲಿ ನಿರ್ಣಯಕ್ಕೆ ಬರಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ ಸಭೆಯಲ್ಲಿ, ಜೆ ಡಿ ಎಸ್ ತಾಲೋಕು ಅದ್ಯಕ್ಷ ಸುಕುಮಾರ್ ಕೊಡ್ತುಗುಳಿ , ಕಾರ್ಯದರ್ಶಿ ರಾಕೇಶ್ ಕುಂಠಿಕಾನ, ಸೇರಿದಂತೆ ಜೆ ಡಿ ಎಸ್ ವಿವಿಧ ನಾಯಕರು ಭಾಗವಹಿಸಿದ್ದರು.

ರಾಜ್ಯ