ಎ. 3 ರಂದು ಸುಳ್ಯದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೋಂದಾವಣಿ ಮತ್ತು ತರಬೇತಿ ಶಿಬಿರ ಕಾರ್ಯಕ್ರಮ.


ಇದೇ ಸೋಮವಾರ ದಿನಾಂಕ 3/04/2023 ರಂದು ಬೆಳಿಗ್ಗೆ ಘಂಟೆ 9:00 ರಿಂದ ಮಧ್ಯಾಹ್ನ 2:00 ವರೆಗೆ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೋಂದಾವಣಿ ಮತ್ತು ತರಬೇತಿ ಶಿಬಿರ ಕಾರ್ಯಕ್ರಮ ನಡೆಯಲಿದೆ (‌ಕಾರ್ಮಿಕ ಕಾರ್ಡ್ ಇಲ್ಲದ 56 ವರ್ಷದ ನೈಜ ಕಾರ್ಮಿಕರು ಭಾಗವಹಿಸಬಹುದು).
ಹೊಸ ಗುರುತಿನ ಚೀಟಿ ನೋಂದಾಯಿಸಲು ಬರುವ ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಶನ್ ಕಾರ್ಡ್ ಮತ್ತು ಒಂದು ಫೋಟೋ ತೆಗೆದುಕೊಂಡು ಬರಬೇಕಾಗುತ್ತದೆ.

ಮತ್ತು ಈಗಾಗಲೇ ಕಾರ್ಮಿಕರ ಕಾರ್ಡ್ ಹೊಂದಿದ ಎಲ್ಲಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡಯಲಿದೆ. ಎಲ್ಲಾ ಕಾರ್ಮಿಕರು ತಮ್ಮ ಕಾರ್ಮಿಕರ ಕಾರ್ಡ್ ತೆಗೆದುಕೊಂಡು ಬರಬೇಕಾಗುತ್ತದೆ.

ಸ್ಥಳ :- ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಸುಳ್ಯ ಇದರ ತಾಲೂಕು ಸಮಿತಿ ಕಾರ್ಯಾಲಯ , ಸಿ ಎ ಬ್ಯಾಂಕ್ ವಾಣಿಜ್ಯ ಸಂಕೀರ್ಣ , ಸರ್ಕಾರಿ ಸಾರಿಗೆ ಬಸ್ ನಿಲ್ದಾಣದ ಎದುರುಗಡೆ , ಸುಳ್ಯ
ಸಂಪರ್ಕಿಸಿ:9482617341

ರಾಜ್ಯ