
ಸುಳ್ಯ ತಾಲೋಕಿನ ಪ್ರತಿಷ್ಠಿತ ದೋಳ ಕುಟುಂಬದವರಾಗಿದ್ದು ಮೂಲತ ಗೂನಡ್ಕದವರಾದ ಸತೀಶ್ ಡಿ .ವಿ ಶಿವಮೊಗ್ಗದ ವಿಷ್ಣು ಸರ್ವಿಸ್ ಸೆಂಟರ್ ಮಾಲಿಕರಾಗಿದ್ದು ಅವರ ಸುದೀರ್ಘ ಸೇವೆ ಹಾಗೂ ಸೋನಿ ಗ್ರಾಹಕರ ಕೊಡುಗೆಯ ಅತ್ಯುತ್ತಮ ಸೇವೆಗಾಗಿ ದಕ್ಷಿಣ ಭಾರತದಲ್ಲಿನ ಹೆಸರಾಂತ ಸೋನಿ ಸರ್ವಿಸ್ ಕೊಡ ಮಾಡುವ “ಸರ್ವಿಸ್ ಎಕ್ಸಲೆನ್ಸ್ ಅವಾರ್ಡ್” 2022 ಭಾಜನರಾಗಿದ್ದಾರೆ ಎಂದು ತಿಳಿದು ಬಂದಿದೆ,



ಮಾರ್ಚ್ 23 ರಂದು ಚೆನ್ನೈನ ರೆಡ್ಡಿ ಸನ್ ಬ್ಲೂ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು ಇವರಿಗೆ ಸೋನಿ ಸಂಸ್ಥೆ ನೀಡಿದೆ. ಪ್ರಶಸ್ತಿಯನ್ನು ಕಂಪನಿಯ ಪ್ರಮುಖರು ಸತೀಶ್ ಡಿ. ವಿ.ಯವರಿಗೆ ಪ್ರಧಾನ ಮಾಡಿದ್ದಾರೆ ಹಲವು ವರ್ಷಗಳಿಂದ ರಾಜ್ಯದ ನಾನಾ ಭಾಗದಲ್ಲಿ ಸೋನಿ ಸರ್ವಿಸ್ ಸೆಂಟರ್ ಹೊಂದಿರುವ ಇವರು ತನ್ನೆಲ್ಲಾ ಸಂಸ್ಥೆಗಳಿಗೆ ಸುಳ್ಯ ಮೂಲದವರನ್ನೇ ಉದ್ಯೂಗಕ್ಕೆ ನೇಮಕ ಮಾಡಿದ್ದು, ಸರಿ ಸುಮಾರು 160 ಕ್ಕೂ ಹೆಚ್ಚು ಸಿಬ್ಬಂದಿಗಳು ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ, ಶಿವಮೊಗ್ಗದಲ್ಲಿ ಅತಿ ದೊಡ್ಡ ವಿಷ್ಣು ಮೆಡಿಕಲ್ ಹೊಂದಿದ್ದು, ಇಂಟೀರಿಯರ್ ಡೆವಲಪ್ಪರ್ ಆಗಿ ಯಶಸ್ವಿ ಉಧ್ಯಮಿಯಾಗಿದ್ದಾರೆ, ನಿವೃತ ಅರಣ್ಯ ಅಧಿಕಾರಿ ದೋಳ ವೀರಪ್ಪ ಗೌಡ ಮತ್ತು ಗೌರಮ್ಮ ದಂಪತಿಗಳ ಪುತ್ರರಾಗಿರುವ ಇವರಿಗೆ ಸುಳ್ಯ ಪಯಸ್ವಿನಿ ಜೆಸಿಐ ಕೊಡಮಾಡುವ ಮೌನ ಸಾಧಕ ಪ್ರಶಸ್ತಿ ,ಸುಳ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಕಸ್ತೂರಿ ಗೌರವ, ಸೇರಿದಂತೆ ನೂರಕ್ಕೂ ಮಿಕ್ಕಿ ಪ್ರಶಸ್ತಿ ಸನ್ಮಾನಗಳು ಒಲಿದು ಬಂದಿದೆ,ಪ್ರಸ್ತುತ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಶಾಖಾ ಮಠ ಶಿವಮೊಗ್ಗ ಶಿಕ್ಷಣ ಕೇಂದ್ರದ ಟ್ರಸ್ಟಿಯಾಗಿದ್ದು ಶಿವಮೊಗ್ಗದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ದಾರೆ.

