
ಸುಳ್ಯದ ಯುವಕ ಪಾವಗಡದಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ತಿಳಿದುಬಂದಿದೆ.
ಸುಳ್ಯ ಕೇರ್ಪಳ ಮೂಲದ ಪ್ರಜ್ವಲ್ ಎಂಬ ಯುವಕ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಮೃತಪಟ್ಟ ಯುವಕ ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ಎಂಬವರಪುತ್ರ ಪ್ರಜ್ವಲ್ ಪಾವಗಡದಲ್ಲಿ ಟೋಲ್ ಸುಪರ್‌ವೈಸರ್ ಆಗಿ ಕೆಲಸದಲ್ಲಿದ್ದರು. ನಿನ್ನೆ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪರಿಣಾಮ ತಲೆ ರಸ್ತೆಗೆ ಬಡಿಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

