
ಹಲವು ಶತಮಾನಗಳ ಬಳಿಕ ಪೆರಾಜೆ ಗ್ರಾಮದ ಕುಂಬಳಚೇರಿಯ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೈವಕಟ್ಟು ಮಹೋತ್ಸವ ಬಾರೀ ವಿಜ್ರಂಭಣೆಯಿಂದ ನಡೆದು ಇದೀಗ ಸಂಪನ್ನಗೊಂಡಿದೆ. ಪರಮಶಿವನ ಅಂಶಾವತಾರ ಶ್ರೀ ವಯನಾಟ್ ಕುಲವನ್ ದೈವವನ್ನು ಕಣ್ತುಂಬಿಕೊಂಡು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಕೃತಾರ್ಥರಾಗಿದ್ದಾರೆ .



ವಯನಾಟ್ ಕುಲವನ್, ಶ್ರೀ ವಿಷ್ಣುಮೂರ್ತಿ ದೈವಗಳ ಕೊಲ ನಡೆಯುವುದರೊಂದಿಗೆ
ಪೆರಾಜೆ ಗ್ರಾಮದ ಕುಂಬಳಚೇರಿ ಶ್ರೀ ವಯನಾಟ್
ದೈವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆದ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವಕ್ಕೆ ಭಕ್ತಿ ಸಂಭ್ರಮದ ಸಂಪನ್ನಗೊಂಡಿತು. ಮಾ.3ರಿಂದ ಆರಂಭಗೊಂಡು ಮೂರು ದಿನಗಳ ಕಾಲ ವಿವಿಧ ದೈವಗಳು ಕೋಲ ರೂಪದಲ್ಲಿ ವಿಜ್ರಂಭಿಸಿ ಭಕ್ತರನ್ನು ಭಕ್ತಿ ಭಾವದ ಪುಳಕಿತರನ್ನಾಗಿಸಿತು.ಮೂರು ಶತಮಾನಗಳ ಬಳಿಕ ನಡೆದ ಉತ್ಸವ ಗ್ರಾಮೀಣ ಭಾಗದಲ್ಲಿ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕೇರಳ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಕ್ತರ ಗಡಣವೇ ಆಗಮಿಸಿ ಉತ್ಸವಕ್ಕೆ
ಸಾಕ್ಷಿಯಾದರು.

ಮಾ.5ರಂದು ಬೆಳಗ್ಗಿನಿಂದ ಕಾರ್ನೊನ್ ದೈವ, ಕೊರಚ್ಛನ್ ದೈವ, ಅತ್ಯಂತ ವಿಶೇಷವಾದ ಕಂಡನಾರ್ ಕೇಳನ್ ದೈವಗಳು ನಡೆದು ಸಂಜೆ ಶ್ರೀ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ನಡೆಯಿತು. ಚೆಂಡೆ ಮೇಳದ ಅಬ್ಬರದ ಮಧ್ಯೆ ವೈಭವೋಪೇತವಾಗಿ ಅಂಗಣ ಪ್ರವೇಶಿಸಿದ ವಯನಾಟ್ ಕುಲವನ್ ದೈವಕ್ಕೆ ಸೂಟೆ ಸಮರ್ಪಣೆ ಮಾಡಲಾಯಿತು. ಬಳಿಕ ವಿಷ್ಣುಮೂರ್ತಿ ದೈವದ ಅಂಗಣ ಪ್ರವೇಶ ಮಾಡಿ ಭಕ್ತ ಸಮೂಹವನ್ನು ಹರಸಿತು. ರಾತ್ರಿ ದೈವಂಕಟ್ಟು ಮಹೋತ್ಸವಕ್ಕೆ ಸಮಾಪ್ತಿಯಾಗಿ ಮರ ಪಿಳರ್ಕಲ್ ನಡೆಯುತು. ಕೈವೀದ್‌ನೊಂದಿಗೆ ಉತ್ಸವಕ್ಕೆ ತೆರೆಯಾಯಿತು.


ಅಚ್ಚುಕಟ್ಟಿನ ಊಟದ ವ್ಯವಸ್ಥೆ: ಚೈತನ್ಯದ ಚಿಲುಮೆಯೊಂದಿಗೆ ಸ್ವಯಂಪ್ರೇರಿತರಾಗಿ ದುಡಿದ ಗ್ರಾಮಸ್ಥರು.
ಮೂರು ದಿನಗಳ ಉತ್ಸವದಲ್ಲಿ ಕುಂಬಳಚೇರಿ ಶಾಲೆಯ ಆಟದ ಮೈದಾನದಲ್ಲಿ ಅಚ್ಚುಕಟ್ಟಿನ ಊಟದ ವ್ಯವಸ್ಥೆ ಮಾಡಲಾಗಿತ್ತು, ಬೆಳಿಗ್ಗೆ ಉಪಾಹಾರ ಮದ್ಯಾಹ್ನ ಊಟ, ಸಂಜೆ ಚಹಾ ತಿಂಡಿ ವ್ಯವಸ್ಥೆ, ರಾತ್ರಿ ಊಟ, ಹೀಗೆ ಮೂರು ದಿನಗಳು ನಿರಂತರವಾಗಿ ಅನ್ನದಾನ ಮಾಡಲಾಯಿತು: ಈ ಎಲ್ಲಾ ಸಂದರ್ಭದಲ್ಲಿ ಗ್ರಾಮದ ಪ್ರತೀ ಮನೆಗಳಿಂದ ಸ್ವಯಂ ಸೇವಕರಾಗಿ ಸ್ವಯಂ ಪ್ರೇರಿತರಾಗಿ ಬಂದು ಪುರುಷರು, ಮಹಿಳೆಯರು, ಮಕ್ಕಳು ಸೇವೆಯನ್ನು ನೀಡಿದರು, ಸರಿ ಸುಮಾರು ಒಂದು ತಿಂಗಳಿನಿಂದಲೇ ಗ್ರಾಮಸ್ಥರು ಮಹೋತ್ಸವದ ಪೂರ್ವ ತಯಾರಿ ಮಾಡಿದ್ದು, ಮಹೋತ್ಸವ ಅದ್ದೂರಿಯಾಗಿ ನೆರವೇರಲು ಸಾದ್ಯವಾಯಿತು, ಮುಖ್ಯವಾಗಿ ಪೆರಾಜೆ ಗ್ರಾಮಸ್ಥರ ಒಗ್ಗಟ್ಟು ಮತ್ತು ಸೇವಾ ರೀತಿ ಮಾದರಿಯಾಗಿತ್ತು,


ಆಡಳಿತ ಸಮಿತಿ ಮತ್ತು ಮಹೋತ್ಸವ ಸಮಿತಿಯ ಜುಗಲ್ ಬಂದಿ
ಆಡಳಿತ ಸಮಿತಿಯ ಪದಾಧಿಕಾರಿಗಳು ಮತ್ತು ಮಹೋತ್ಸವ ಸಮಿತಿಯ ಪದಾಧಿಕಾರಿಗಳ ಜುಗಲ್ ಬಂದಿ ಮಹೋತ್ಸವ ಅಡ್ಡಿಯಿಲ್ಲದೆ ನಡೆಯಲು ಸಾಧ್ಯವಾಯಿತು, ಗ್ರಾಮ ಸಮಿತಿಯವರು ಹಾಗೂ ಉಪ ಸಮಿತಿಯ ಪದಾಧಿಕಾರಿಗಳು ತಮ್ಮೆಲ್ಲಾ ಜವಾಭ್ಧಾರಿ ಅರಿತು ಸೇವಗೈದು, ಮಹೋತ್ಸವದ ಮುಖ್ಯ ಭಾಗವಾದರು, ಆರ್ಥಿಕ , ಪ್ರಚಾರ, ಆಹಾರ, ನೀರಾವರಿ,ಪಾರ್ಕಿಂಗ್, ದ್ವನಿ ಮತ್ತು ಬೆಳಕು, ಕಾರ್ಯಾಲಯ, ವೇದಿಕೆ ಮತ್ತು ಅಲಂಕಾರ,ಮಹಿಳಾ ಸ್ವಯಂ ಸೇವಕರ ತಂಡ, ಆರೋಗ್ಯ, ಕಾರ್ಯಾಲಯ,ಸ್ವಾಗತ ಸೇವೆಗಳು ಅಮೋಘವಾಗಿತ್ತು.

ಬೆಲೆ ಕಟ್ಟಲಾಗದ ಸ್ಥಾನಿಕರ ಸೇವೆ .
ಕ್ಷೇತ್ರದಲ್ಲಿ ಅರಂತೋಡು , ಆಲೆಟ್ಟಿ ಸೇರಿದಂತೆ ವಿವಿಧ ಬಾಗದ ಸ್ಥಾನಿಕರು ನಿರ್ವಹಿಸಿದ ಸೇವೆ ಅದ್ಬುತವಾಗಿತ್ತು, ಆನೆ ಪಂದಲ್, ಅಂಗಣ ನಿರ್ಮಾಣ ಮನಸೂರೆಗೊಳ್ಳುತ್ತಿತ್ತು. ಹಾಗೂ ಕಾರ್ಯಕ್ರಮದಲ್ಲಿ ಕನ್ನಡ ಮಲೆಯಾಳ ಭಾಷೆಗಳ ವಿವರಣೆ ಕ್ಷಣದ ರೋಚಕತೆಯನ್ನು ಸಾರುತ್ತಿತ್ತು.
ಮಹೋತ್ಸವಕ್ಕೆಂದು ಕುಂಬಳಚೇರಿ ವಯನಾಟ್ ಕ್ಷೇತ್ರಕ್ಕೆ ಆಗಮಿಸು ಭಕ್ತಾದಿಗಳನ್ನು ಹೊದ್ದೆಟ್ಟಿ ಕುಟುಂಬಸ್ಥರು.
ಕುಂಬಳಚೇರಿ ಕುಟುಂಬಸ್ಥರು, ಬಂಟೋಡಿ ಪ್ರೆಂಡ್ಸ್, ಮಜಿಕೋಡಿ ಕುಟುಂಬಸ್ಥರು, ಹಾಗೂ ಮಹೋತ್ಸವ ಸಮಿತಿ ನಿರ್ಮಿಸಿದ ಸ್ವಾಗತ ಕಮಾನು ಕೈ ಬೀಸಿ ಭಕ್ತರನ್ನು ಕರೆಯುತ್ತಿತ್ತು, ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು ಸ್ವಾಗತ ಬ್ಯಾನರ್ ಗಳು ಅಲ್ಲಲ್ಲಿ ರಾರಾಜಿಸುತ್ತಿತ್ತು, ದೊಡ್ಡ ದೊಡ್ಡ ಎಲ್ ಈ ಡಿ ವಾಲ್ ಗಳು ಮಹೋತ್ಸವ ಕಾರ್ಯಕ್ರಮಗಳನ್ನು ಭಕ್ತರ ಹತ್ತಿರಗೊಳಿಸುತ್ತಿತ್ತು, ಸಾಕಷ್ಟು ರೀತಿಯಲ್ಲಿ ಭಕ್ತರು ಮಾಡುತ್ತಿದ್ದರು.

