
ಆದಿಚುಂಚನಗಿರಿ ಸಂಸ್ಥಾನ ಮಠದ ಶಾಖಾ ಮಠ
ಶಿವಮೊಗ್ಗ ಹೊರವಲಯದ ಗುರುಪುರ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಬಿಜಿಎಸ್ ಕ್ರೀಡಾಂಗಣದಲ್ಲಿ ಪೋಷಕರ ಕ್ರೀಡಾಕೂಟ ಕಾರ್ಯಕ್ರಮ ಆಯೋಜಿಸಲಾಯಿತು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಸದ್ಗುರು ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಪಾರಿವಾಳಗಳನ್ನು ಹಾರಿಸಿ ಬಿಡುವ ಮೂಲಕ ಪೋಷಕರ ಕ್ರೀಡೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು, ದಿವ್ಯ ಸಾನಿಧ್ಯವಹಿಸಿದ ಅವರು ಆಶೀರ್ವಚನ ನೀಡಿದರು.



ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕರುಗಳಾದ ಹಿರಣ್ಣಯ್ಯ ಹೆಗಡೆ , ವಾಸಪ್ಪ ಗೌಡ ,ಗೂನಡ್ಕದ ಸತೀಶ್ ಡಿ.ವಿ , ಶ್ರೀ ಆದಿಚುಂಚನಗಿರಿ ಕನ್ನಡ ಮಾಧ್ಯಮ ಪ್ರೌಢ ಶಾಲೆ ಮುಖ್ಯೋಪಾಧ್ಯರಾದ ರಮೇಶ್ , ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಗುರುಪುರ ಪ್ರಾಂಶುಪಾಲರಾದ ಸುರೇಶ್ , ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ನೂರಾರು ಪೋಷಕರು ಕ್ರೀಡೋತ್ಸವದಲ್ಲಿ ಪಾಲ್ಗೊಂಡರು, ಕಾರ್ಯಕ್ರಮದಲ್ಲಿ ಸಹಕಾರ ನೀಡುತ್ತಿರುವ ಟ್ರಸ್ಟಿಗಳನ್ನು ಗೌರವಿಸಲಾಯಿತು.


