ಸರ್ವಧರ್ಮ ಸಮ್ಮೇಳನದ ಮೂಲಕ ಸೌಹಾರ್ಧತೆ ಸಾರುವ ಗೂನಡ್ಕದ ಪೇರಡ್ಕದ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ಫೆ.17 ರಿಂದ 19 ರ ತನಕ – ಉರೂಸ್ ಸಮಾರಂಭ.

ಸರ್ವಧರ್ಮ ಸಮ್ಮೇಳನದ ಮೂಲಕ ಸೌಹಾರ್ಧತೆ ಸಾರುವ ಗೂನಡ್ಕದ ಪೇರಡ್ಕದ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ಫೆ.17 ರಿಂದ 19 ರ ತನಕ – ಉರೂಸ್ ಸಮಾರಂಭ.

ಸರ್ವಧರ್ಮ ಸಮ್ಮೇಳನದ ಮೂಲಕ ಸೌಹಾರ್ಧತೆ ಸಾರುವ ಗೂನಡ್ಕದ ಪೇರಡ್ಕದ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ಫೆ.17 ರಿಂದ 19 ರ ತನಕ – ಉರೂಸ್ ಸಮಾರಂಭ ಮತ್ತು ಮೂರು ದಿನಗಳ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಫೆ17 ರಿಂದ ಫೆ.19 ರ ತನಕ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್ ಹೇಳಿದ್ದಾರೆ.


ಅವರು ಇಂದು ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರ ನೀಡಿದರು , ಫೆ.17 ರಂದು ಜುಮಾ ನಮಾಜಿನ ಬಳಿಕ ಧ್ವಜಾರೋಹಣ ನಡೆಯಲಿದ್ದು. ಪೇರಡ್ಕ ಎಂ.ಜೆ.ಎಂ. ಅಧ್ಯಕ್ಷ ಎಸ್.ಆಲಿಹಾಜಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಅಪರಾಹ್ನ 3 ರಿಂದ ಮುಖಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ ನಡೆಯುವುದು. ರಾತ್ರಿ ಸರ್ವ ಧರ್ಮ ಸಮ್ಮೇಳನ ಹಾಗೂ ಉಲಮಾ, ಉಮರಾ ಸಂಗಮ ನಡೆಯಲಿದ್ದು, ಸಮಾರಂಭದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಸಲೀಮ್ ವಾಫಿ ಅಂಭಲಕಂಡಿ ಭಾಗವಹಿಸಲಿದ್ದಾರೆ.


ಫೆ.18 ರಂದು ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣವನ್ನು ಇ.ಪಿ. ಅಬೂಬಕ್ಕರ್ ಅಲ್ ಕಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ
ಫೆ.19 ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದ್ದು ಮುಖ್ಯ ಪ್ರಭಾಷಣವನ್ನು ನೌಶದ್ ಬಾಖವಿ ತಿರುವನಂತಪುರ ಮಾಡಲಿದ್ದಾರೆ , ಮೂರು ದಿನಗಳ ಈ ಪುಣ್ಯ ಕಾರ್ಯದಲ್ಲಿ ಉಲಮಾ, ಉಮರಾ ಹಾಗೂ ಸಾಮಾಜಿಕ,ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಫೆ.20 ರಂದು 2 ಗಂಟೆಗೆ ಪಳ್ಳಿನೇರ್ಚೆ ನಡೆಯಲಿದೆ. ಪ್ರತೀ ದಿನ ರಾತ್ರಿ ತೆಕ್ಕಿಲ್ ಮಹಮ್ಮದ್ ಹಾಜಿ ಮೆಮೋರಿಯಲ್ ತಖ್‌ವೀಯ್ಯತ್ತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯುವುದು ಎಂದು ಹೇಳಿದರು.

ಮಸೀದಿ ವಠಾರದಲ್ಲಿ ನಡೆದಿದೆ ,ಕೋಟಿಗೂ ಮಿಕ್ಕಿ ಅಭಿವೃದ್ಧಿ ಕಾಮಗಾರಿ : ಟಿ.ಎಂ. ಶಹೀದ್
:
ಪೇರಡ್ಕ – ಗೂನಡ್ಕದ ಮಸೀದಿ ವಠಾರದಲ್ಲಿ ಸುಮಾರು 1 ಕೋಟಿಯಷ್ಟು ಅಭಿವೃದ್ಧಿ ಕಾರ್ಯಗಳು ಹೊಸದಾಗಿ ನಡೆದಿದೆ. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ರೂ. 60 ಲಕ್ಷ ರೂ ವೆಚ್ಚದಲ್ಲಿ ಪ್ರವಾಸಿ ಮಂದಿರ ನಿರ್ಮಾಣವಾಗಿದೆ , ಸಿದ್ಧರಾಮಯ್ಯರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಈ ಅನುದಾನ ಬಿಡುಗಡೆಗೊಂಡಿದೆ. ರೂ.20 ಲಕ್ಷ ವೆಚ್ಚದಲ್ಲಿ ಹೊಸ ದರ್ಗಾ ನಿರ್ಮಾಣವಾಗಿದೆ. ಮಸೀದಿಯ ಪಕ್ಕದಲ್ಲಿ ಓಲ್ ನಿರ್ಮಾಣಗೊಂಡಿದೆ. ಶೌಚಾಲಯ ಇತ್ಯಾದಿ ಕಾಮಗಾರಿಗಳು ಸೇರಿ ಒಟ್ಟು 1 ಕೋಟಿ ರೂ ಅಭಿವೃದ್ಧಿ ಕಾಮಗಾರಿಗಳು ನಡೆದಿರುವುದಾಗಿ ಅವರು ಮಾಹಿತಿ ನೀಡಿದರು.


ಸಂಪಾಜೆ ಗ್ರಾಮ ಪಂಚಾಯತ್‌ನವರು ಕೂಡಾ ಉತ್ತಮ ಸ್ಪಂದನೆ ನೀಡುತ್ತಿದ್ದು ನಮ್ಮ ಕೇಳಿಕೆಯ ಮೇರೆಗೆ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಮತ್ತು ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಕ್ಷೇತ್ರದ ಶಾಸಕರ ಸಹಕಾರದಿಂದ ರಸ್ತೆ ಸರಿ ಪಡಿಸಿದ್ದಾರಲ್ಲದೆ, ದಾರಿ ದೀಪ ಇತ್ಯಾದಿ ಬೇಡಿಕೆಯನ್ನು ಈಡೇರಿಸಿದ್ದಾರೆಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಕಾರ್ಯದರ್ಶಿ ಜಿ.ಕೆ. ಹಮೀದ್ ಪ್ರಮುಖರಾದ ಜಾಕೀರ್ ಹುಸೇನ್, ಎಸ್.ಕೆ. ಹನೀಫ್, ಅಬ್ದುಲ್ ಖಾದರ್ ಮೊಟ್ಟೆಂಗಾರ್ ಇದ್ದರು.

ರಾಜ್ಯ