
ಸುಳ್ಯ ತಾಲೂಕಿನ ವಿವಿಧ ಭಾಗದಲ್ಲಿ ಬಿರುಸಿನ ಮಳೆ ಸುರಿದಿದೆ.
ಕಾದ ಕಬ್ಬಿಣದಂತಾಗಿದ್ದ ಇಳೆಗೆ ಮಳೆಯ ಸಿಂಚನ ಒಂದಷ್ಟು ತಂಪಾಗಿಸಿದೆ .ಸುಳ್ಯ ಭಾಗದಲ್ಲಿ ಹಲವು ಗ್ರಾಮದಲ್ಲಿ ರಾತ್ರಿ 8 ರ ಸುಮಾರಿಗೆ ಮಳೆಯಾಗಿದೆ, ಪೆರಾಜೆ ಗ್ರಾಮ , ಅರಂತೋಡು ಸೇರಿದಂತೆ ಕೆಲವು ಕಡೆಗಳಲ್ಲಿ ಮಳೆಯಾಗಿದೆ, ಬಿರುಸಿನ ಮಳೆಗೆ ಭೂಮಿ ತಂಪಾದರೆ, ಈ ಭಾಗದ ಅಡಿಕೆ ಬೆಳೆಗಾರರು ಮಾತ್ರ ಒಮ್ಮೆ ಗೆ ಸುರಿದ ಮಳೆಗೆ ಕಂಗಾಲಾಗಿದ್ದಾರೆ. ಬಹುತೇಕ ಕಡೆಗಳಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಗಾಲ ಸುರಿಯುವಂತೆ ಮಳೆ ಸುರಿದಿದೆ. ಸುಳ್ಯ ನಗರ ವ್ಯಾಪ್ತಿಯಲ್ಲೂ ಮಳೆ ಸುರಿಯುತ್ತಿದೆ.


