INDW VS SL T20: ಲಂಕಾ ಬೌಲರ್‌ಗಳಿಗೆ ಬೆಂಡೆತ್ತಿದ ಶಫಾಲಿ-ಸ್ಮೃತಿ: ಭಾರತಕ್ಕೆ ಸತತ 4ನೇ ಜಯ!

INDW VS SL T20: ಲಂಕಾ ಬೌಲರ್‌ಗಳಿಗೆ ಬೆಂಡೆತ್ತಿದ ಶಫಾಲಿ-ಸ್ಮೃತಿ: ಭಾರತಕ್ಕೆ ಸತತ 4ನೇ ಜಯ!

ತಿರುವನಂತಪುರಂ: ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ದಾಖಲೆಯ ಆರಂಭಿಕ ಜೊತೆಯಾಟದ ನೆರವಿನಿಂದ ಭಾರತ ಮಹಿಳಾ ತಂಡವು ಶ್ರೀಲಂಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ 30 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 4-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ.

ದಾಖಲೆಯ ಜೊತೆಯಾಟ​ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ (79) ಮತ್ತು ಸ್ಮೃತಿ ಮಂಧಾನ (80) ಭದ್ರ ಬುನಾದಿ ಹಾಕಿಕೊಟ್ಟರು. ಲಂಕಾ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದ ಈ ಜೋಡಿ ಮೊದಲ ವಿಕೆಟ್‌ಗೆ 162 ರನ್‌ಗಳ ದಾಖಲೆಯ ಜೊತೆಯಾಟವಾಡಿತು.

ಇದರ ಫಲವಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ಇದು ಮಹಿಳಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ವಿಶೇಷವೆಂದರೆ, ಶಫಾಲಿ ವರ್ಮಾ ಈ ಸರಣಿಯಲ್ಲಿ ಸತತ ಮೂರನೇ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ಬೃಹತ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡವು ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಸಿಲುಕಿ ನಿಗದಿತ ಓವರ್‌ಗಳಲ್ಲಿ ಗುರಿ ತಲುಪಲು ವಿಫಲವಾಯಿತು. ಅಂತಿಮವಾಗಿ ಲಂಕಾ ಪಡೆ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ ಸರಣಿಯಲ್ಲಿ ತನ್ನ ಪಾರಮ್ಯವನ್ನು ಮುಂದುವರೆಸಿದೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ