ರೋಟರಿ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ -ಸಂಭ್ರಮದ ಆಚರಣೆ.

ರೋಟರಿ ವಿದ್ಯಾಸಂಸ್ಥೆಗಳ ವಾರ್ಷಿಕೋತ್ಸವ -ಸಂಭ್ರಮದ ಆಚರಣೆ.

ರೋಟರಿ ಚಾರಿಟೇಬಲ್ ಟ್ರಸ್ಟ್ ( ರಿ) ಸುಳ್ಯ ಇದರ ಆಡಳಿತಕ್ಕೆ ಒಳಪಟ್ಟಿರುವ ಸುಳ್ಯದ ರೋಟರಿ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವವು ಡಿಸೆಂಬರ್ ೨೦ರಂದು ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮಿತ್ತಡ್ಕದ ಆವರಣದಲ್ಲಿ ನಡೆಯಿತು.

ಸಂಸ್ಥೆಯ ಧ್ವಜಾರೋಹಣವನ್ನು  ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯದ ಅಧ್ಯಕ್ಷರಾಗಿರುವ ರೊ.ಮೇಜರ್ ಡೋನರ್ ಡಾ.ರಾಮ ಮೋಹನ್ ಅವರು ನೆರವೇರಿಸಿದರು.ಈ ಕಾರ್ಯಕ್ರಮಕ್ಕೆ  ಪ್ರಾಥಮಿಕ ಶಾಲೆಯ ಶಿಕ್ಷಕಿ ರಶ್ಮಿ ಅವರು ಗಣ್ಯರನ್ನು ಸ್ವಾಗತಿಸಿದರು, ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಸ್ವಪ್ನ ಅವರು ವಂದಿಸಿದರು. ಡಾ.ರಾಮಮೋಹನ್ ಅವರ ಅಧ್ಯಕ್ಷತೆಯಲ್ಲಿ  ನಡೆದ ಈ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಕ್ಯಾಂಮ್ಕೋ ಲಿಮಿಟೆಡ್ ಮಂಗಳೂರಿನ ಮಾಜಿ ನಿರ್ದೇಶಕರಾದ ಶ್ರೀ ಕೃಷ್ಣ ಪ್ರಸಾದ್ ಮಡ್ತಿಲ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ರೋಟರಿ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೊ.ಪ್ರಭಾಕರನ್ ನಾಯರ್ ಅವರು ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಮೇಜರ್ ಡೋನರ್ ಪಿಪಿ ರೊ.ರಾಮಚಂದ್ರ.ಪಿ, ಟ್ರಸ್ಟಿಗಳಾದ ರೊ.ಮಧುಸೂದನ್ ಕುಂಬಕೋಡು, ರೊ.ರಾಮಚಂದ್ರ ಕಾಮತ್

ರೊ.ಪುರುಷೋತ್ತಮ್,ರೊ.ಆನಂದ್ ಖಂಡಿಗ, ರಕ್ಷಕ ಶಿಕ್ಷಕ ಸಂಘದ ಸದಸ್ಯರು,ಪ್ರಾಥಮಿಕ, ಪ್ರೌಢ ಮತ್ತು ಕಾಲೇಜಿನ ವಿದ್ಯಾರ್ಥಿ ನಾಯಕರಾದ ಕ್ರಮವಾಗಿ ಸಂಗಮ್, ಅನನ್ಯ ಮತ್ತು ದಿಶಾ,

ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀಮತಿ ರೇವತಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲೆಯಾಗಿರುವ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ವೀಣಾ ಶೇಡಿಕಜೆ ಅವರು ೨೦೨೪-೨೫ನೇ ಶೈಕ್ಷಣಿಕ ವರದಿಯನ್ನು ವಾಚಿಸಿದರು.

ಕಾಲೇಜಿನವಿದ್ಯಾರ್ಥಿಗಳಾದ ಯಶಸ್ವಿ ಮತ್ತು ತುಷಾರ ಇವರು ಪ್ರಾರ್ಥಿಸಿದರು.ಶಿಕ್ಷಕಿ ಶ್ರೀಮತಿ ರೇವತಿ ಅವರು ಧನ್ಯವಾದ ಗೈದರು.ವಿದ್ಯಾರ್ಥಿಗಳಾದ ಅಹನ್ ಕಿರಣ್ ಮತ್ತು  ಚರಿಷ್ಮಾ ರೈ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

ಸಾಧಕ ಶಿಕ್ಷಕರು ಮತ್ತು ರಾಜ್ಯ ಮಟ್ಟದ ವಿದ್ಯಾರ್ಥಿ ಸಾಧಕರಿಗೆ ಅಭಿನಂದಿಸಿ, ಸನ್ಮಾನಿಸಲಾಯಿತು. ಸಂಸ್ಥೆಯಲ್ಲಿ ನಡೆಸಿದ ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಶೈಕ್ಷಣಿಕ