ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ ಕರ್ನಾಟಕ ವತಿಯಿಂದ ರಾಜ್ಯ ಮಟ್ಟದ ಮೂರನೇ ವಾರ್ಷಿಕ ಸಭೆಯನ್ನು ಬೀರೂರು ನಗರದಲ್ಲಿ ಆಯೋಜಿಸಿದ್ದು, ಸಭೆಯಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಸದಸ್ಯರುಗಳು ಭಾಗವಹಿಸಿದ್ದರು.

ಕಾರ್ಯಕ್ರಮ ಉಧ್ಘಾಟಿಸಿದ ಗದಗ ನಗರದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕರಾದ ವಿಶ್ವನಾಥ ಬೇಂದ್ರೆಯವರು ಮಾತನಾಡಿ; ಪಾಲಕರಲ್ಲಿ ಕನ್ನಡ ವ್ಯಾಮೊಹ ಹೆಚ್ಚಿಸಿ, ಮೌಲ್ಯಯುತ ಶಿಕ್ಷಣ ನೀಡಬೇಕು. ಮಕ್ಕಳಲ್ಲಿ ಶಾಲೆಯ ಬಗ್ಗೆ ಆಸಕ್ತಿ ಹೆಚ್ಚಿಸುವಲ್ಲಿ ಶಿಕ್ಷಕರ ಆಸಕ್ತಿ ಬಹಳ ಬೇಕು. ಹಣಕ್ಕಿಂತ ಆರೋಗ್ಯ ಆನಂದ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಕನ್ನಡ ಭಾಷಾ ಶಿಕ್ಷಕಿಯಾದ ಕುಮಾರಿ ಹರ್ಷಿಯ ಬಾನು ರವರು ಮಾತನಾಡಿ: ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಅಮ್ಮನ ಪ್ರೇರಣೆ. FAIL – FIRST ATTEMPT IN LIFE ಎಂಬ ಆಶಾಭಾವದಿಂದ ಶಿಕ್ಷಣ ಕಲಿತೆ, ವಿಙ್ಞಾನ ಓದಿ ವೈದ್ಯಯಾಗಬೇಕು ಎಂಬ ಆಸೆ ಇಡೇರಲಿಲ್ಲ, ಬಿಎ ಬಿಎಡ್ ವ್ಯಾಸಂಗವಾದ ಮೇಲೆ ಟ್ಯೂಷನ್ ಸೆಂಟರ್ ಅವಕಾಶ ಕೊಟ್ಟರು. ದೃಶ್ಯ ಮತ್ತು ಶ್ರಾವ್ಯ ಮೂಲಕ ಕಲಿಕೋಪಕರಣ ಬಳಸಿ ಬೋಧನೆ ಪರಿಣಾಮಕಾರಿ. ಶಿಕ್ಷಣವನ್ನು ವೃತ್ತಿಗಿಂತ ಪ್ರೌವೃತ್ತಿಯಾದಾಗ ಮಾತ್ರ ಆಸಕ್ತಿದಾಯಕವಾಗಿ ಕಲಿಸಬಹುದು. ಕನ್ನಡಬಾರದವರಿಗೆ ಕನ್ನಡ ಕಲಿಸುವ ಮುಲಕ ಸಾರ್ಥಕ ಸೇವೆ ಸಲ್ಲಿಸಬಹುದು. Teacher is king maker, ರಾಷ್ಟ್ರ ಕಟ್ಟುವಲ್ಲಿ ಭಾಷೆ ಮಹತ್ವದ ಪಾತ್ರವಹಿಸುತ್ತದೆ. ಕನ್ನಡದ ಬಗ್ಗೆ ವ್ಯಾಮೋಹ ಕಡಿಮೆಯಾಗುತ್ತಿದೆ. ಸವಾಲುಗಳ ನಡುವೆ ಕನ್ನಡ ರಾಷ್ಟ್ರೀಯ ಶಿಕ್ಷಣ ಒಕ್ಕೂಟ ಉತ್ತಮ ಕಾರ್ಯ ಮಾಡುತ್ತಿದೆ. ಮೂಲಭೂತ ಸೌಕರ್ಯ ಕೊರತೆಗಳನ್ನು ನೀಗಿಸಿ ಶಿಕ್ಷಣ ಕೊಡಬೇಕು ಮತ್ತು ಪಡೆಯಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.
ನಂತರ ಸದಸ್ಯರ ಪರಿಚಯ ಮತ್ತು ಅಧ್ಯಕ್ಷರಿಂದ ವಾರ್ಷಿಕ ವರದಿ ಬಳಿಕ ಬೀರೂರು ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (PM SHRI) ಭೇಟಿ ಮಾಡಿ, ಶಾಲೆಯ SDMC ಸಮಿತಿಯವನ್ನು, ಶಾಲೆಯ ಸಿಬ್ಬಂದಿಯನ್ನು ಸಂದರ್ಶನ ಮಾಡಿ ವಾರದ ಸಂತೆಯಲ್ಲಿ ಪಾಲ್ಗೊಳ್ಳಲಾಯಿತು.
ಈ ಸಭೆಯಲ್ಲಿ ಅದ್ಯಕ್ಷರಾದ ನಾಗಲಿಂಗಸ್ವಾಮಿ , ರಾಜ್ಯ ನಿರ್ದೇಶಕ ರಾದ ಶ್ರೀಮತಿ ರಮ್ಯ, ಪವಿತ್ರ, ಪಾರಿಲ, ಸದಾಶಿವ, ಸತೀಶ್, ಶಿವಕುಮಾರ್, ಕಾನೂನು ಸಲಹೆಗಾರರಾದ ಪ್ರಸನ್ನ ಚಿತ್ರದುರ್ಗ , ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

