ಕರಾವಳಿ ಉತ್ಸವ 2025: ಲೋಗೋ ವಿನ್ಯಾಸ ಸ್ಪರ್ಧೆಗೆ ಇಂದೇ ಕೊನೆಯ ದಿನ!

ಕರಾವಳಿ ಉತ್ಸವ 2025: ಲೋಗೋ ವಿನ್ಯಾಸ ಸ್ಪರ್ಧೆಗೆ ಇಂದೇ ಕೊನೆಯ ದಿನ!

ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ‘ಕರಾವಳಿ ಉತ್ಸವ 2025’ ಕ್ಕೆ ಹೊಸ ಕಳೆ ನೀಡಲು ಆಕರ್ಷಕವಾದ ಲೋಗೋ ವಿನ್ಯಾಸ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸೃಜನಶೀಲ ಯುವಕ-ಯುವತಿಯರಿಗೆ ಇದು ಸುವರ್ಣಾವಕಾಶವಾಗಿದ್ದು, ಅತ್ಯುತ್ತಮ ಲೋಗೋ ವಿನ್ಯಾಸ ಮಾಡಿದವರಿಗೆ ಬರೋಬ್ಬರಿ ₹50,000 ನಗದು ಬಹುಮಾನ ನೀಡಲಾಗುವುದು ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರಾವಳಿ ಉತ್ಸವದ ಲೋಗೋ ಸ್ಪರ್ಧೆ ವಿವರಗಳು ಏನಿದು ಸ್ಪರ್ಧೆ? ಕರಾವಳಿ ಉತ್ಸವ 2025 ರ ಅಧಿಕೃತ ಲೋಗೋ ವಿನ್ಯಾಸ.

  • ಪ್ರಮುಖ ಆಶಯ: ವಿನ್ಯಾಸವು ಕರಾವಳಿಯ ಕಲೆ, ಸಂಸ್ಕೃತಿ ಮತ್ತು ಪ್ರವಾಸೋದ್ಯಮವನ್ನು ಸಮಗ್ರವಾಗಿ ಬಿಂಬಿಸಬೇಕು.
  • ಬಹುಮಾನ ಮೊತ್ತ: ವಿಜೇತ ವಿನ್ಯಾಸಕ್ಕೆ ₹50,000 (ಐವತ್ತು ಸಾವಿರ ರೂಪಾಯಿ) ನಗದು ಬಹುಮಾನ.
  • ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು?ಸ್ಪರ್ಧಿಗಳು ತಮ್ಮ ವಿನ್ಯಾಸವನ್ನು ಇಂದೇ ಇ-ಮೇಲ್ ಮೂಲಕ ಸಲ್ಲಿಸಬೇಕು.
  • ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 17, 2025, ಸಂಜೆ 5:00 PM
  • ಸಲ್ಲಿಸಬೇಕಾದ ಇ-ಮೇಲ್ ವಿಳಾಸ: adtourismmangalore@gmail.com
ಪ್ರಾದೇಶಿಕ ರಾಜ್ಯ