ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಹೊಸ ವಿವಾದವೊಂದನ್ನು ತಲೆಮೇಲೆ ಎಳೆದುಕೊಂಡಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಯಕ್ಷಗಾನ ಕಲಾವಿದರ ಜೀವನದ ಬಗ್ಗೆ ಮಾತನಾಡಿದ ಅವರು ದೀರ್ಘ ಕಾಲ ತಮ್ಮ ಹೆಂಡತಿಯನ್ನು ಬಿಟ್ಟು ಮೇಳದೊಂದಿಗೆ ಇರುವ ಯಕ್ಷಗಾನ ಕಲಾವಿದರು ಸಲಿಂಗ ಕಾಮದಲ್ಲಿ ತೊಡಗುವುದು ಸಾಮಾನ್ಯ ಮತ್ತು ಸ್ತ್ರೀ ಪಾತ್ರದಾರಿಗಳನ್ನು ಇದಕ್ಕೆ ಉಪಯೋಗಿಸುವುದು ಸಾಮಾನ್ಯವಾಗಿ ಇದೆ ಎಂದು ಹೇಳುವ ಮೂಲಕ ಯಕ್ಷಗಾನ ಕಲಾವಿದರ ಮತ್ತು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.


