ನವೆಂಬರ್ 21ರಂದು ಜಾಲ್ಸೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ವಾರ್ಷಿಕ ಹಬ್ಬ

ನವೆಂಬರ್ 21ರಂದು ಜಾಲ್ಸೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ವಾರ್ಷಿಕ ಹಬ್ಬ

ರಾಷ್ಟೋತ್ಥಾನ ಶಿಶುಮಂದಿರ ಟ್ರಸ್ಟ್ (ರಿ.) ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆಗಳು, ವಿನೋಬನಗರ, ಜಾಲ್ಸೂರು ಗ್ರಾಮ, ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆಯ ಈ ಸಂಸ್ಥೆಯ ವಾರ್ಷಿಕ ಹಬ್ಬವನ್ನು ನವೆಂಬರ್ 21, 2025 (ಶುಕ್ರವಾರ) ರಂದು ವೈಭವದಿಂದ ಆಚರಿಸಲು ಸಜ್ಜಾಗಿದೆ.

ಬೆಳಿಗ್ಗೆ 9.30ಕ್ಕೆ ಧ್ವಜಾರೋಹಣ ಮತ್ತು ಸರಸ್ವತಿ ವಂದನೆ, ಬಳಿಕ 10.00ಕ್ಕೆ ಸಭಾ ಕಾರ್ಯಕ್ರಮ, ಹಾಗೂ 11.30ಕ್ಕೆ ಶಿಶುಮಂದಿರದ ಪುಟಾಣಿಗಳಿಂದ ಸಾಂಸ್ಕೃತಿಕ ಕಲರವ ನಡೆಯಲಿದೆ. ಮಧ್ಯಾಹ್ನ 1.00ಕ್ಕೆ ಭೋಜನ ಮತ್ತು ನಂತರ 1.30ಕ್ಕೆ ಸಂಸ್ಥೆಯ ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮೆರುಗು ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ್ಯ ಶ್ರೀ ನ. ಸೀತಾರಾಮ, ಅಧ್ಯಕ್ಷರು, ವಿವೇಕಾನಂದ ವಿದ್ಯಾಸಂಸ್ಥೆಗಳು, ವಿನೋಬನಗರ ವಹಿಸಲಿದ್ದಾರೆ.ಮುಖ್ಯ ಅತಿಥಿಯಾಗಿ ಸನ್ಮಾನ್ಯ ಕು. ಭಾಗೀರಥಿ ಮುರುಳ್ಯ, ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ, ಭಾಗವಹಿಸಲಿದ್ದಾರೆ.

ಗೌರವ ಅತಿಥಿಗಳಾಗಿ

  • ಸನ್ಮಾನ್ಯ ಶ್ರೀ ಗಿರಿಯಪ್ಪ ಗೌಡ ಕಾಪಿಲ, ಮ್ಯಾನೇಜಿಂಗ್ ಡೈರೆಕ್ಟರ್, ಸೀತಾ ಐಸ್‌ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು
  • ಸನ್ಮಾನ್ಯ ಶ್ರೀ ಮುರಳೀಧರ ಕೆ., ನಿರ್ದೇಶಕರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು (ರಿ.)
  • ಸನ್ಮಾನ್ಯ ಶ್ರೀಮತಿ ಸಾವಿತ್ರಿ, ಅಧ್ಯಕ್ಷರು, ಗ್ರಾಮ ಪಂಚಾಯತ್, ಜಾಲ್ಸೂರು
  • ಸನ್ಮಾನ್ಯ ಶ್ರೀಮತಿ ಶೀತಲ್ ಯು.ಕೆ., ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುಳ್ಯ
    ಇವರು ಉಪಸ್ಥಿತರಿರುವರು.

ಕಾರ್ಯಕ್ರಮದ ಯಶಸ್ವಿಗಾಗಿ ಆಡಳಿತ ಮಂಡಳಿ, ಕ್ರೀಡಾ ಹಾಗೂ ವಾರ್ಷಿಕೋತ್ಸವ ಸಮಿತಿ, ಅಧ್ಯಾಪಕ ವೃಂದ, ವಿದ್ಯಾರ್ಥಿವೃಂದ, ಪೋಷಕ ವೃಂದ ಮತ್ತು ಹಿರಿಯ ವಿದ್ಯಾರ್ಥಿ ಸಂಘಗಳು ಸಕ್ರಿಯ ಸಿದ್ಧತೆ ನಡೆಸುತ್ತಿವೆ.

ರಾಜ್ಯ ಶೈಕ್ಷಣಿಕ