ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ| ರೇಣುಕಾ ಪ್ರಸಾದ್ ಕೆ.ವಿ ಅವರಿಂದ ತೊಡಿಕಾನ ದೇವಸ್ಥಾನಕ್ಕೆ ಚಿನ್ನದ ತ್ರಿನೇತ್ರ, ಬೆಳ್ಳಿಯ ಕವಚ ಸಮರ್ಪಣೆ

ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ ಡಾ| ರೇಣುಕಾ ಪ್ರಸಾದ್ ಕೆ.ವಿ ಅವರಿಂದ ತೊಡಿಕಾನ ದೇವಸ್ಥಾನಕ್ಕೆ ಚಿನ್ನದ ತ್ರಿನೇತ್ರ, ಬೆಳ್ಳಿಯ ಕವಚ ಸಮರ್ಪಣೆ

ಕುರುಂಜಿ ವೆಂಕಟ್ರಮಣ ಗೌಡರ ಸುಪುತ್ರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ‘ಕಮಿಟಿ ಬಿ’ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ| ರೇಣುಕಾ ಪ್ರಸಾದ್ ಕೆ.ವಿ., ಪತ್ನಿ ಡಾ| ಜ್ಯೋತಿ ಆರ್. ಪ್ರಸಾದ್ ಮತ್ತು ಮಕ್ಕಳು ಡಾ| ಅಭಿಜ್ಞಾ ಹಾಗೂ ಮೌರ್ಯ ಆರ್. ಕುರುಂಜಿ ಅವರೊಂದಿಗೆ ದೇವರ ಭಕ್ತಿಭಾವಪೂರ್ಣ ಸೇವೆಗೆ ಸಮರ್ಪಣೆಯಾಗಿ ಶ್ರೀ ಮಲ್ಲಿಕಾರ್ಜುನ ದೇವರ ಮೂಲ ಲಿಂಗಕ್ಕೆ ಚಿನ್ನದ ತ್ರಿನೇತ್ರ ಮತ್ತು ಬೆಳ್ಳಿಯ ಕವಚವನ್ನು ಸಮರ್ಪಿಸಿದರು.

ಮಧ್ಯಾಹ್ನ 12 ಗಂಟೆಗೆ ನಡೆದ ಸಮರ್ಪಣಾ ಕಾರ್ಯಕ್ರಮದ ವೇಳೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಹಾಗೂ ಸದಸ್ಯರು, ಊರಿನ ಭಕ್ತರು ಮತ್ತು ವಾದ್ಯಘೋಷದೊಂದಿಗೆ ಕುಟುಂಬವನ್ನು ದೇವಾಲಯಕ್ಕೆ ಕರೆದುಕೊಂಡು ಹೋದರು.

ಡಾ| ರೇಣುಕಾಪ್ರಸಾದ್ ಕುಟುಂಬ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕವಚ ಸಮರ್ಪಣೆಯ ನಂತರ ಮಧ್ಯಾಹ್ನದ ಪೂಜೆ ವೈಭವದಿಂದ ನೆರವೇರಿತು.

ಈ ಸಂದರ್ಭದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಗೌಡರ ಯುವ ಸೇವಾ ಸಂಘದ ಸ್ಥಾಪಕಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಂಘದ ಅಧ್ಯಕ್ಷ ಪಿ.ಎಸ್. ಗಂಗಾಧರ್, ನ.ಪಂ. ಮಾಜಿ ಅಧ್ಯಕ್ಷರು ಎನ್.ಎ. ರಾಮಚಂದ್ರ, ಎಂ. ವೆಂಕಪ್ಪ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ ಸೇರಿದಂತೆ ಅನೇಕ ಗಣ್ಯರು ಹಾಗೂ ಊರಿನ ಪ್ರಮುಖರು ಹಾಜರಿದ್ದರು.

ಆಧ್ಯಾತ್ಮ ಧಾರ್ಮಿಕ ರಾಜ್ಯ