ಅಮೆರಿಕದ ಅಗ್ರಗಣ್ಯ ಚಿಪ್ ತಯಾರಿಕಾ ಸಂಸ್ಥೆ ಇಂಟೆಲ್ (Intel) ನಲ್ಲಿ ಅಮೆರಿಕ ಸರ್ಕಾರ ನೇರವಾಗಿ ಶೇ.10ರಷ್ಟು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ. 2022ರಲ್ಲಿ ಇಂಟೆಲ್‌ಗೆ ನೀಡಲಾದ ಬಂಡವಾಳ ನೆರವು ಇದೀಗ ಷೇರುಗಳಲ್ಲಿ ಪರಿವರ್ತನೆಯಾಗಿದ್ದು, ಸರ್ಕಾರದ ಪಾಲಾಗಿಯೇ ದಾಖಲಾಗಿದೆ.

ಖಾಸಗಿ ಕಂಪನಿಗಳಲ್ಲಿ ಸರ್ಕಾರ ನೇರ ಹೂಡಿಕೆ ಮಾಡಿರುವುದು ಪಕ್ಕಾ ಕ್ಯಾಪಿಟಲಿಸ್ಟ್ ಆರ್ಥಿಕತೆಯಾದ ಅಮೆರಿಕದಲ್ಲಿ ಅಪರೂಪದ ಬೆಳವಣಿಗೆಯಾಗಿ ಪರಿಣಮಿಸಿದ್ದು, ಉದ್ಯಮ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಸರ್ಕಾರ ಕೇವಲ ಇಂಟೆಲ್‌ನಲ್ಲಿ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಹಲವು ಪ್ರಮುಖ ಕಂಪನಿಗಳಲ್ಲೂ ಇದೇ ಮಾದರಿಯ ಪಾಲು ಪಡೆಯಲು ಮುಂದಾಗಿದೆ. ಇದರ ಪರಿಣಾಮವಾಗಿ, “ಅಮೆರಿಕ ನಿಧಾನವಾಗಿ ಕ್ಯಾಪಿಟಲಿಸ್ಟ್ ದೇಶದಿಂದ ಸೋಷಿಯಲಿಸ್ಟ್ ದಿಕ್ಕಿನತ್ತ ಸಾಗುತ್ತಿದೆ” ಎಂಬ ಆತಂಕವನ್ನು ಅಲ್ಲಿನ ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ.
