ಚದುರಂಗ ವಿಶ್ವಕಪ್ 2025 ಫೈನಲ್: ಭಾರತೀಯ ಆಟಗಾರ್ತಿಯರ ಮುಖಾಮುಖಿ

ಚದುರಂಗ ವಿಶ್ವಕಪ್ 2025 ಫೈನಲ್: ಭಾರತೀಯ ಆಟಗಾರ್ತಿಯರ ಮುಖಾಮುಖಿ

ಜುಲೈ 25:
ಚದುರಂಗದ ಜಗತ್ತಿನಲ್ಲಿ ಭಾರತ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಮಹಿಳಾ ಚದುರಂಗ ವಿಶ್ವಕಪ್ 2025 ಫೈನಲ್ ಪಂದ್ಯದಲ್ಲಿ ಭಾರತ ಮೂಲದ ಇಬ್ಬರು ಶ್ರೇಷ್ಠ ಮಹಿಳಾ ಚೆಸ್ ಪಟುಗಳು, ಗ್ರ್ಯಾಂಡ್ ಮಾಸ್ಟರ್‌ಗಳು – ಕೊನೇರು ಹಂಪಿ ಮತ್ತು ಯುವ ಪ್ರತಭೆ ದಿವ್ಯ ದೇಶ್ಮುಖ್ – ಪರಸ್ಪರ ಸೆಣಸದ್ದಾರೆ.

ಈ ಸ್ಪರ್ಧೆಯ ಮೂಲಕ ಭಾರತ ಚದುರಂಗದ ಜಗತ್ತಿನಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ಗಟ್ಟಿ ಮಾಡುತ್ತಿದೆ. ಅಂತಿಮ ಪಂದ್ಯದಲ್ಲಿ ಗೆಲುವು ಯಾರದಾಗಲಿ, ವಿಶ್ವಕಪ್ ಚಾಂಪಿಯನ್ ಪಟ್ಟವು ಭಾರತದಲ್ಲಿಯೇ ಉಳಿಯಲಿದ್ದು, ಈ ಹೆಮ್ಮೆಯ ಕ್ಷಣಕ್ಕೆ ಭಾರತೀಯರು ಕಾಯುತ್ತಿದ್ದಾರೆ.

ಭಾರತೀಯ ಚದುರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಫೈನಲ್‌ನಲ್ಲಿ ಇಬ್ಬರು ಭಾರತೀಯರು ಮುಖಾಮುಖಿಯಾಗುತ್ತಿದ್ದಾರೆ ಎಂಬುದು ವಿಶೇಷ. ಇದೊಂದು ಹೆಮ್ಮೆಯ ಸಾಧನೆಯಾಗಿದ್ದು, ಮುಂದಿನ ತಲೆಮಾರಿಗೆ ಪ್ರೇರಣೆಯಾಗಿದೆ.

ಅಂತರಾಷ್ಟ್ರೀಯ ಕ್ರೀಡೆ