ಮತ್ತೆ ಹಳ್ಳ ಹಿಡಿದ ಧರ್ಮಸ್ಥಳ ಅಸ್ತಿಪಂಜರ ಕೇಸ್ – ಸ್ಥಳ ಮಹಜರಿಗೆ ಬಾರದ ಪೊಲೀಸ್ ಅಧಿಕಾರಿಗಳು

ಮತ್ತೆ ಹಳ್ಳ ಹಿಡಿದ ಧರ್ಮಸ್ಥಳ ಅಸ್ತಿಪಂಜರ ಕೇಸ್ – ಸ್ಥಳ ಮಹಜರಿಗೆ ಬಾರದ ಪೊಲೀಸ್ ಅಧಿಕಾರಿಗಳು

ಭಾರೀ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಅಸ್ತಿಪಂಜರ ಪ್ರಕರಣ ಈಗ ಆಮೆ ಗತಿಯಲ್ಲಿ ಸಾಗುತ್ತಿದೆ.

ನೂರಾರು ಶವಗಳನ್ನು ಹೂತು ಹಾಕಿದ್ದೇನೆ ಎಂದು ನ್ಯಾಯಾಲಯದ ಮುಂದೆ ಹಾಜರಾಗಿದ್ದ ವ್ಯಕ್ತಿ ಮತ್ತು ಆತನ ವಕೀಲರು ಸ್ಥಳ ಮಹಜರಿಗೆ ಬಂದರೂ ಅಲ್ಲಿಗೆ ಪೊಲೀಸ್ ಬರದೇ ನಿರಾಸೆಯಾಗಿ ಹಿಂದಿರುಗಿದ ಘಟನೆ ನಿನ್ನೆ ನಡೆದಿದೆ.

ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು ಪೊಲೀಸ್ ಅಧಿಕಾರಿಗಳು ಬಾರದೆ ಇರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳದ ಅತ್ಯಾಚಾರ ಕೊಲೆಗಳ ವರದಿಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದರೂ ಸ್ಥಳೀಯ ಮತ್ತು ರಾಜ್ಯದ ಮಾಧ್ಯಮಗಳಲ್ಲಿ ಬಾರದೇ ಇರುವುದಕ್ಕೆ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ಅಪರಾಧ ರಾಜ್ಯ ರಾಷ್ಟ್ರೀಯ