ನ್ಯೂಸ್ ರೂಮ್ ಫಸ್ಟ್ ಗೆ ಇಂದು ಸಂತೋಷದ ದಿನ ನಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ವಿಡಿಯೋ ಅಪ್ಲೋಡ್ ಮಾಡಿದ್ದ ಹೆಸರಿಗೂ ಗತಿಗೆಟ್ಟ ಚಾನೆಲ್ ನ ವಿಡಿಯೋ ವನ್ನೂ ಯೂಟ್ಯೂಬ್ ಡಿಲೀಟ್ ಮಾಡಿದೆ.


ನ್ಯೂಸ್ ರೂಮ್ ಫಸ್ಟ್ ನೀಡಿದ ದೂರಿಗೆ ಸ್ಪಂದಿಸಿದ ಯೂಟ್ಯೂಬ್ ಆ ವಿಡಿಯೋವನ್ನು ಡಿಲೀಟ್ ಮಾಡುವ ಮೂಲಕ ನ್ಯೂಸ್ ರೂಮ್ ಫಸ್ಟ್ ಗೆ ನ್ಯಾಯ ಒದಗಿಸಿದೆ.
ಈ ವಿಚಾರವಾಗಿ ನ್ಯೂಸ್ ರೂಮ್ ಫಸ್ಟ್ ಈಗಾಗಲೇ ಸೈಬರ್ ಕ್ರೈಂ ವಿಭಾಗದಲ್ಲಿ ಮತ್ತು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಅಲ್ಲಿ ಕೂಡ ನ್ಯಾಯ ಲಭಿಸುವ ನಿರೀಕ್ಷೆಯಲ್ಲಿದೆ.

ಸತ್ಯ ಮತ್ತು ನ್ಯಾಯಕ್ಕೆ ದೇವರ ಕೃಪೆ ಇರುತ್ತದೆ ಎಂಬುದಕ್ಕೆ ಇದು ಉದಾಹರಣೆ. ಉಂಡ ಮನೆಗೆ ದ್ರೋಹ ಬಗೆದರೆ ಅದಕ್ಕೆ ಕಾಲವೇ ಉತ್ತರ ಕೊಡುತ್ತದೆ. ನ್ಯೂಸ್ ರೂಮ್ ಫಸ್ಟ್ ಎಂದಿನಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ. ನಮ್ಮ ಎಲ್ಲಾ ಓದುಗ ಮಿತ್ರರಿಗೆ ಧನ್ಯವಾದಗಳು.