ಇರಾನ್ನ ರಾಯಭಾರ ಕಚೇರಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ, ಇಸ್ರೇಲ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇರಾನ್ನ ಉಪ ಮುಖ್ಯಸ್ಥ ಮಿಷನ್ ಮೊಹಮ್ಮದ್ ಜಾವೇದ್ ಹುಸೇನಿ ಮಾತನಾಡುತ್ತಾ, “ಇಸ್ರೇಲ್ ನಿರ್ದೋಷಿ ಇರಾನ್ ಜನರ ಮೇಲೆ ದಾಳಿ ನಡೆಸುತ್ತಿದೆ. ಪಾಶ್ಚಾತ್ಯ ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡುತ್ತಿಲ್ಲ, ಹಾಗೂ ಈ ದಾಳಿಯನ್ನು ಎಲ್ಲಾ ದೇಶಗಳು ಖಂಡಿಸಬೇಕು” ಎಂದು ಹೇಳಿದರು.


ಹಮಾಸ್ನ ನೆಪದಲ್ಲಿ ಪ್ಯಾಲೆಸ್ಟೀನಿಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಹಿಂಸಾಚಾರವೇ ಈ ಸಂಘರ್ಷದ ಮೂಲ ಕಾರಣವೆಂದು ಅವರು ದೂರಿದರು. ಹುಸೇನಿ ಅವರು ಇರಾನ್ನ ಬಳಿ ಯಾವುದೇ ಪರಮಾಣು ಶಸ್ತ್ರಾಸ್ತ್ರಗಳಿಲ್ಲ ಎಂದು ತಿಳಿಸಿ, “ಆದರೆ ಇಸ್ರೇಲ್ನ ಬಳಿ 75ರಿಂದ 400 ಪರಮಾಣು ಬಾಂಬ್ಗಳಿವೆ. ಇರಾನ್ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ, ಇಸ್ರೇಲ್ ಮಾತ್ರ ಈವರೆಗೆ ಐದು ದೇಶಗಳ ಮೇಲೆ ದಾಳಿ ನಡೆಸಿದೆ” ಎಂದು ಹೇಳಿದರು.
ಈ ಸಂದರ್ಭ ಇರಾನ್ ಭಾರತವನ್ನು ಉದ್ದೇಶಿಸಿ, ಜಾಗತಿಕ ಶಾಂತಿಗಾಗಿ ಮಧ್ಯಸ್ಥಿಕೆಯ ಪಾತ್ರವಹಿಸಬೇಕೆಂದು ಮನವಿ ಮಾಡಿತು. ಅಲ್ಲದೆ, ಅಮೆರಿಕ ಹಾಗೂ ಪಾಕಿಸ್ತಾನದ ಹಸ್ತಕ್ಷೇಪದ ವಿರುದ್ಧವೂ ಇರಾನ್ ಎಚ್ಚರಿಕೆ ನೀಡಿದ್ದು, ಈ ಸಂಘರ್ಷದಲ್ಲಿ ತಟಸ್ಥರಾಗಿರುವಂತೆ ಸೂಚಿಸಿದೆ.