RSS ಮುಖಂಡನ ಮನೆ ಮೇಲೆ ದಾಳಿ – ದಕ್ಷಿಣ ಕನ್ನಡ ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌

RSS ಮುಖಂಡನ ಮನೆ ಮೇಲೆ ದಾಳಿ – ದಕ್ಷಿಣ ಕನ್ನಡ ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌

ಮಂಗಳೂರು: ಆರ್‌ಎಸ್‌ಎಸ್ ಮುಖಂಡ U.G. ರಾಧಾ ಅವರ ಮನೆಯಲ್ಲಿ ನಡೆದ ದಾಳಿಯ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್‌ಪಿ) ಡಾ.ಅರುಣ್ ಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.ದಾಳಿಯ ಸಂದರ್ಭ ಹಾಗೂ ತನಿಖೆಯ ಕ್ರಮಗಳ ಬಗ್ಗೆ ಕಾನೂನು ಪ್ರಕ್ರಿಯೆ ಉಲ್ಲಂಘನೆಯು ಸಂಭವಿಸಿರುವುದಾಗಿ ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.

ಆರ್‌ಎಸ್‌ಎಸ್‌ನ ಹಿರಿಯ ಮುಖಂಡರಾದ U.G. ರಾಧಾ ಅವರ ಮನೆಗೆ ಜೂನ್ 1 ಮತ್ತು 2ರ ಮಧ್ಯರಾತ್ರಿಯಲ್ಲಿ ಪೊಲೀಸರು ನುಗ್ಗಿ, ಅನಧಿಕೃತವಾಗಿ ಫೋಟೋ ತೆಗೆದು ಜಿಪಿಎಸ್ ಅಪ್ಪ್‌ಗೆ ಅಪ್‌ಲೋಡ್ ಮಾಡಿದ ಘಟನೆಗೆ ರಾಧಾ ಅವರು ದೂರು ನೀಡಿ, ಪೊಲೀಸರ ಈ ಅತಿಕ್ರಮಣ “ಅನಧಿಕೃತ ದಾಳಿ”, “ಖಾಸಗಿತನ ಉಲ್ಲಂಘನೆ” ಮತ್ತು “ಮಾನನಷ್ಟ”ಕ್ಕೆ ಕಾರಣವಾಗಿದೆ ಎಂದು ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ₹ 20 ಲಕ್ಷ ಪರಿಹಾರವನ್ನು ಕೋರಿದ್ದಾರೆ.ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್‌ ಪೀಠ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ನೀಡಿದ್ದು, ಈ ದಾಳಿಯ ಹಿಂದಿನ ಉದ್ದೇಶ ಮತ್ತು ಸಂದರ್ಭಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದೆ.

ಅಪರಾಧ ರಾಜ್ಯ