ಡಾ. ಆರ್.ಕೆ. ನಾಯರ್ ರವರ ಮಿಯಾವಾಕಿ ಅರಣ್ಯದ ಬಗ್ಗೆ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಟ್ವೀಟ್ ಮೂಲಕ ಪ್ರಶಂಸೆ

ಡಾ. ಆರ್.ಕೆ. ನಾಯರ್ ರವರ ಮಿಯಾವಾಕಿ ಅರಣ್ಯದ ಬಗ್ಗೆ ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಟ್ವೀಟ್ ಮೂಲಕ ಪ್ರಶಂಸೆ

ಪರಿಸರದ ಹಿತಕ್ಕಾಗಿ ಮಿಯಾವಾಕಿ ತಂತ್ರಜ್ಞಾನ ಬಳಸಿ ಅರಣ್ಯ ನಿರ್ಮಿಸಿರುವ ಡಾ. ಆರ್.ಕೆ. ನಾಯರ್ ರವರ ಪರಿಶ್ರಮವನ್ನು ಮಹೀಂದ್ರ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ತಮ್ಮ ಟ್ವೀಟ್ ಮೂಲಕ ಪ್ರಶಂಸಿಸಿದ್ದಾರೆ

“ನಾನು ಮಿಯಾವಾಕಿ ಅರಣ್ಯದ ಬಗ್ಗೆ ತಿಳಿದಿದ್ದೆ, ಆದರೆ ಡಾ. ನಾಯರ್ ಅವರು ಭಾರತದಲ್ಲಿ ವಿಶ್ವದ ಅತಿದೊಡ್ಡ ಅರಣ್ಯವನ್ನು ನಿರ್ಮಿಸಿದ ಬಗ್ಗೆ ನನಗೆ ತಿಳಿದಿರಲಿಲ್ಲ,” ಎಂದು ಅವರು ಹೇಳಿದ್ದಾರೆ.

ಅವರು ತಮ್ಮ ಸಂದೇಶದಲ್ಲಿ, “ಯುಎಸ್ ಇತ್ತೀಚೆಗೆ ಪರಿಸರ ಸಂರಕ್ಷಣೆ ಮತ್ತು ಸಿಸ್ಟೈನಬಿಲಿಟಿಯನ್ನು ತಮ್ಮ ಪ್ರಾಥಮಿಕ ಪಟ್ಟಿ ಇಂದ ತೆಗೆದಿರುವ ಈ ಸಮಯದಲ್ಲಿ, ನಮ್ಮಲ್ಲಿ ಇಂತಹ ಹೀರೋಗಳು ಇದ್ದಾರೆ ಎಂಬುದಕ್ಕೆ ನಾನು ಕೃತಜ್ಞನಾಗಿದ್ದೇನೆ,” ಎಂದು ತಿಳಿಸಿದ್ದಾರೆ.

ಈ ಟ್ವೀಟ್‌ನೊಂದಿಗೆ “THE GREEN HERO OF INDIA” ಎಂಬ ಶೀರ್ಷಿಕೆಯನ್ನು ಹೊಂದಿರುವ ಡಾ. ನಾಯರ್ ಅವರ ವಿಡಿಯೋ ಕೂಡ ಹಂಚಲಾಗಿದೆ. ಇದರ ಮೂಲಕ ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ವ್ಯಕ್ತಿಯೊಬ್ಬನಿಂದಾಗಿಯೂ ಹೇಗೆ ಮಹತ್ತರವಾದ ಬದಲಾವಣೆ ಸಾಧ್ಯ ಎಂಬುದನ್ನು ಬಿಂಬಿಸಲಾಗಿದೆ.

ಡಾ. ಆರ್.ಕೆ. ನಾಯರ್ ಅವರು ಮಿಯಾವಾಕಿ ತಂತ್ರಜ್ಞಾನವನ್ನು ಬಳಸಿ, ತ್ವರಿತವಾಗಿ ಬೆಳೆವ ಅರಣ್ಯವನ್ನು ನಿರ್ಮಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮಹತ್ತರ ಕೊಡುಗೆ ನೀಡಿದ್ದಾರೆ.

ರಾಷ್ಟ್ರೀಯ