
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲಾ ಶಾಖಾಮಠಗಳ ಸದ್ಗುರು ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಗೆ ಜನುಮ ದಿನದ ಸಂಭ್ರಮ, ಭಕ್ತ ವೃಂದದಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ ಸುಳ್ಯ ಸಮೀಪ ಚೆಂಬು ಗ್ರಾಮ ಸ್ವಾಮೀಜಿಯವರ ಹುಟ್ಟೂರು, ಬಾಲ್ಯದಲ್ಲಿಯೇ ಮನೆ ಬಿಟ್ಟು ಸನ್ಯಾಸಿ ದೀಕ್ಷೆ ತೊಟ್ಟವರು , ಆದಿಚುಂಚನಗಿರಿ ಮಾಹಾ ಸ್ವಾಮೀಜಿ ಜಗದ್ಗುರು ಶ್ರೀ ಶ್ರೀ ಶ್ರೀ ಭಾಲಗಂಗಾಧರನಾಥ ಸ್ವಾಮೀಜಿಯವರ ಪರಮಾಪ್ತ ಶಿಷ್ಯರಾಗಿ ಬೆಳೆದು



ಸಕಲ ವಿದ್ಯೆ ಕಲಿತು, ವೇಧಶಾಸ್ತ್ರದಲ್ಲಿ ಎಂ ಎ ಪಧವಿ ಪಡೆದು ಇದೀಗ ಆದಿಚುಂಚನಗಿರಿಯ ಶಿವಮೊಗ್ಗ ಮತ್ತು ಉತ್ತರ ಕನ್ನಡ ಶಾಖಾ ಮಠಗಳ ಸದ್ಗುರುಗಳಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಅನ್ನಧಾತರಾಗಿರುವ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿಯವರು

ಶಿವಮೊಗ್ಗದಲ್ಲಿ ಪ್ರತಷ್ಠಿತ ಶಿಕ್ಷಣ ಸಂಸ್ಥೆ ಉಗಮಕ್ಕೆ ಕಾರಣರಾದವರು, ಗುರುಪುರ,ಕಾರೇಣೆ, ಭದ್ರಾವತಿ ಶಂಕರಘಟ್ಟ, ಕುಮುಟಾದಲ್ಲಿಯೂ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಸುಮಾರು 10000 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಅನುವು ಮಾಡಿಕೊಟ್ಟ ಸದಾ ನಗುಮುಖದ , ಕ್ರೀಯಾ ಶೀಲಾ ಚಟುವಟಿಕೆಯ ಸ್ವಾಮೀಜಿಯಾಗಿ ಗುರುತಿಸಿಕೊಂಡವರು, ಶಿವಮೊಗ್ಗದಲ್ಲಿ ಕಾಲಬೈರವೇಶ್ವರ ಮತ್ತು ಕಾಳಿಕಾಂಭ ದೇವಸ್ಥಾನ ನಿರ್ಮಿಸಿ, ಆದಿಚುಂಚನಗಿರಿಯ ಈಗಿನ ಮಹಾ ಸ್ವಾಮೀಜಿಯವರಾದ ಶ್ರೀಶ್ರೀಶ್ರೀ ಜಗದ್ಗುರು ನಿರ್ಮಲಾನಂಧನಾಥ ಸ್ವಾಮೀಜಿಯವರ ಪರಮಾಪ್ತರು.

ಮತ್ತು ದೇಶ ವಿದೇಶಗಳಲ್ಲಿರುವ ಆದಿಚುಂಚನ ಗಿರಿ ಸಂಸ್ಥಾನ ಮಠಗಳ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಮಹಾನ್ ಸಾಧಕರಲೊಬ್ಬರು.
ಇದೀಗ ಇವರ ಜನುಮದಿನವನ್ನು ಮಠದ ಭಕ್ತಾದಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

