
ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ ಮತ್ತು ಅಮರತರಂಗ ಸುಳ್ಯ ಇದರ ಸಹಯೋಗದೊಂದಿಗೆ ಜಿಂದಾಲ್ ಅಲ್ಯುಮಿನಿಯಂ ಕಂಪನಿಯ ಉದಾರ ಕೊಡುಗೆಯಾದ ನೂತನ ಶೌಚಾಲಯ ಕಟ್ಟಡ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಅಮರ ಸುಳ್ಯದ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡ ನಾಟಕ ಪ್ರದರ್ಶನವು ನ. ೩೦ರಂದು ಕುಕ್ಕುಜಡ್ಕ ಸುವರ್ಣ ರಂಗ ಚೊಕ್ಕಾಡಿ ವಿದ್ಯಾ ಸಂಸ್ಥೆಯ ಸಭಾಭವನದಲ್ಲಿ ನಡೆಯಿತು. ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.



ಅಮರಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪದ್ಮಪ್ರಿಯ ಮೇಲ್ತೋಟ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಅಮರ ತರಂಗದ ಅಧ್ಯಕ್ಷ ಕೆ. ಆರ್. ತೇಜಕುಮಾರ್ ಕುಡೆಕಲ್ಲು, ಜಿಂದಾಲ್ ಅಲ್ಯೂಮಿನಿಯಂ ಕಂಪೆನಿಯ ಹಿರಿಯ ವ್ಯವಸ್ಥಾಪಕ ನಾಗೇಂದ್ರ ಭಟ್, ಸಾಹಿತಿ ಹಾಗೂ ಸಂಶೋಧಕ ಎ.ಕೆ. ಹಿಮಕರ, ಆಹಾರ ಸರಬರಾಜು ಇಲಾಖೆಯ ಪಡಿತರ ವ್ಯವಸ್ಥೆಯ ಜನ ಜಾಗೃತಿ ಸಮಿತಿಯ ಜಿಲ್ಲಾ ಸದಸ್ಯ ರಾಧಾಕೃಷ್ಣ ಬೊಳ್ಳೂರು, ಕುಕ್ಕುಜಡ್ಕ ಸೊಸೈಟಿ ಅಧ್ಯಕ್ಷ ಕೇಶವ ಕರ್ಮಜೆ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ಇದರ ಮುಖ್ಯೋಪಾಧ್ಯಾಯ ಸಂಕೀರ್ಣ ಚೊಕ್ಕಾಡಿ ಉಪಸ್ಥಿತರಿದ್ದರು.
ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಿಲಾ ಮಟ್ಟದಲ್ಲಿ ವಿಜೇತರಾದ ಚೊಕ್ಕಾಡಿ ಪ್ರೌಢಶಾಲಾ ವಿದ್ಯಾರ್ಥಿನಿಯರಾದ ಕುಮಾರಿ ರಚಿತಾ,ಮಾನ್ಯ,ವರ್ಷಿಣಿ,ಅನನ್ಯ, ಹಸ್ತಾ,ರೇಣುಕಾ,ಜಲಧಿ
ಅತ್ಲೆಟಿಕ್ಸ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ಪದಕ ವಿಜೇತರಾದ
ಕುಮಾರಿ ರಮ್ಯ,ಭಾನವಿ ಹಾಗೂ ಪುನೀತ್ ರಾಜ್
ಜಿಲ್ಲಾ ಮಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ವಿಜೇತರಾದ ಯಶ್ವಿತ್, ಮನ್ವಿತ್ ಪ್ರತಿಭಾ ಕಾರಂಜಿಯಲ್ಲಿ ವಿಜೇತ ವಿದ್ಯಾರ್ಥಿನಿ ಶ್ರೀ ಹಸ್ತಾ ಹಾಗೂ ಯೋಗದಲ್ಲಿ ದಾಖಲೆ ಮಾಡಿದ ತನ್ವಿ ಇವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಗೌರವಿಸಲಾಯಿತು.
ಮಕ್ಕಳಿಗೆ ಕ್ರೀಡಾ ತರಭೇತಿ ನೀಡಿದ ಹಾಗೂ ರಾಷ್ಟ್ರ ಮಟದ ಕಿರುಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತರಾದ ತೇಜಸ್ವಿ ಕಡಪಳ ಹಾಗೂ ಶಾಲಾ ಶೌಚಾಲಯ ನಿರ್ಮಾಣದಲ್ಲಿ ಸಹಕಾರ ನೀಡಿದ ಜಿಂದಾಲ್ ಕಂಪನಿಯ ಕಾನೂನು ಸಲಹೆಗಾರ ಶ್ರೀ ನಾಗೇಂದ್ರ ಭಟ್ ರವರನ್ನು ಕೂಡ ಶಾಲಾ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು.

ರಾಧಾಕೃಷ್ಣ ಬೊಳ್ಳೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ತೇಜಸ್ವಿ ಕಡಪಳ ಸ್ವಾಗತಿಸಿ, ಸಂಕೀರ್ಣ ಚೊಕ್ಕಾಡಿ ವಂದಿಸಿದರು