ಬೈಕ್‍-ಪಿಕಪ್ ಡಿಕ್ಕಿ : ಬೈಕ್ ಸವಾರ  ಸುರೇಶ್‍ ಭಂಡಾರಿ ಮೃತ್ಯು.

ಬೈಕ್‍-ಪಿಕಪ್ ಡಿಕ್ಕಿ : ಬೈಕ್ ಸವಾರ  ಸುರೇಶ್‍ ಭಂಡಾರಿ ಮೃತ್ಯು.

ಪುತ್ತೂರು: ಬೈಕ್‍ ಹಾಗೂ ಪಿಕಪ್ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್‍ ಸವಾರ ಮೃತಪಟ್ಟ ಘಟನೆ ಮಾಣಿ-ಮೈಸೂರು ಹೆದ್ದಾರಿಯ ಕಾವು ಸಮೀಪ ಇಂದು ಬೆಳಿಗ್ಗೆ ನಡೆದಿದೆ.

ಅಮ್ಮಿನಡ್ಕದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವ ಮಾಡೂರು ಗ್ರಾಮದ ಕಾವು ಬಜಿಕುಡೇಲು ದಿ. ರಾಮ ಭಂಡಾರಿ ಎಂಬವರ ಪುತ್ರ ಅವಿವಾಹಿತ ಸುರೇಶ್ ಭಂಡಾರಿ (45) ಅಪಘಾತದಿಂದ ಮೃತಪಟ್ಟವರು.

ಸುರೇಶ್‍ ಭಂಡಾರಿ ಇಂದು ಬೆಳಗ್ಗೆ ಬೈಕ್‌ನಲ್ಲಿ ಅಮ್ಚಿನಡ್ಕದ ಸೆಲೂನ್ ಅಂಗಡಿಗೆ ತೆರಳುತ್ತಿದ್ದ ವೇಳೆ ಸುಳ್ಯ ಕಡೆಯಿಂದ ಕಾವಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬರುತ್ತಿದ್ದ ಪಿಕಪ್ ನಡುವೆ ಅಪಾಘತ ಸಂಭವಿಸಿದೆ ಎನ್ನಲಾಗಿದೆ.

ರಾಜ್ಯ