ಸುಂಟಿಕೊಪ್ಪದಲ್ಲಿ  ಬೈಕ್ ಮರಕ್ಕೆ ಡಿಕ್ಕಿ ಇಬ್ಬರು ಸಾವು

ಸುಂಟಿಕೊಪ್ಪದಲ್ಲಿ  ಬೈಕ್ ಮರಕ್ಕೆ ಡಿಕ್ಕಿ ಇಬ್ಬರು ಸಾವು

.

(ಸುಂಟಿಕೊಪ್ಪ ಆ.9* : ಬೈಕ್ ಮರಕ್ಕೆ ಅಪ್ಪಳಿಸಿದ

ಪರಿಣಾಮ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪ ರಾಷ್ಟ್ರೀಯ ಹೆದ್ದಾರಿಯ ಶಾಂತಿಗೇರಿ ಎಂಬಲ್ಲಿ ನಡೆದಿದೆ.

ಪಿರಿಯಾಪಟ್ಟಣ ತಾಲ್ಲೂಕು ನವಿಲೂರು ಗ್ರಾಮದ

ಆಕಾಶ್ ಹಾಗೂ ಪ್ರಸನ್ನ ಮೃತ ದುರ್ದೈವಿಗಳಾಗಿದ್ದಾರೆ.

ಕಟ್ಟಡ ನಿರ್ಮಾಣದ ಸೆಂಟ್ರಿಂಗ್ ಕೆಲಸಕ್ಕೆಂದು

ಪಿರಿಯಾಪಟ್ಟಣದಿಂದ ಮಡಿಕೇರಿಗೆ ಗುರುವಾರ ರಾತ್ರಿ

ಆಗಮಿಸುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಆಕಾಶ್ ಸ್ಥಳದಲ್ಲೇ

ಮೃತಪಟ್ಟರೆ, ಪ್ರಸನ್ನ ಚಿಕಿತ್ಸೆ ಫಲಕಾರಿಯಾಗದೆ

ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ

ದಾಖಲಿಸಿಕೊಂಡಿದ್ದಾರೆ

ರಾಜ್ಯ