
ಕೆವಿಜಿ ಅಮರಜ್ಯೋತಿಯಲ್ಲಿ ಆಗಸ್ಟ್ 5ರಂದು ಚಾರ್ಟರ್ ಅಕೌಂಟೆಂಟ್ ಫೌಂಡೇಶನ್ ಓರಿಯೆಂಟೇಷನ್ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಯುತ ಶ್ರೀನಿಧಿ ದೇ೦ಗೋಡಿ ಚಾರ್ಟರ್ಡ್ ಅಕೌಂಟೆಂಟ್ ರವರು ವಿದ್ಯಾರ್ಥಿಗಳಿಗೆ ಚಾರ್ಟರ್ಡ್ ಅಕೌಂಟೆಂಟ್ ಪದವಿಯ ಮಹತ್ವ ಹಾಗು ವಿವಿಧ ಸ್ತರಗಳಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸಿ ಎ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹಾಗೂ ಯಶಸ್ಸನ್ನು ಗಳಿಸುವ ಕುರಿತು ಮನಮುಟ್ಟುವಂತೆ ವಿವರಿಸಿದರು.


ಕಾಲೇಜಿನ ಉಪನ್ಯಾಸಕ ಸಿ ಎ ಸಂಯೋಜಕರಾದ ದೀಕ್ಷಿತ್ ಎಂ ಕೆ ಇವರು ಮಾತನಾಡಿ ಪ್ರಥಮ ವಾಣಿಜ್ಯ ವಿದ್ಯಾರ್ಥಿಗಳಿಗೆ ದಿನಾಂಕ 6 ಆಗಸ್ಟ್ 2024 ರಿಂದ ಸಿ ಎ ಫೌಂಡೇಶನ್ ತರಗತಿಗಳು ಪ್ರಾರಂಭವಾಗುವುದು ಹಾಗು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾಲೇಜಿನ ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ ಮಾತನಾಡಿ ಸಿ ಎ ಫೌಂಡೇಶನ್ ತರಗತಿಗಳಲ್ಲಿ ಗಣಿತ ವಿಷಯದ ಮಹತ್ವದ ಕುರಿತು ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿಗಳಾದ ಗಗನ್ ದೀಪ್ ಕಾರ್ಯಕ್ರಮವನ್ನು ನಿರೂಪಿಸಿದರು. ನಹೀಮ ತಸ್ನೀನ್ ಇವರು ಸ್ವಾಗತವನ್ನು ಕೋರಿದರು ಹಾಗು ರೀಫಾ ಫಾತಿಮಾ ಧನ್ಯವಾದವನ್ನು ಅರ್ಪಿಸಿದರು.
ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ ವಿ,ಟ್ರಸ್ಟಿ ಡಾ. ಜ್ಯೋತಿ ಆರ್ ಪ್ರಸಾದ್ ಹಾಗೂ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

