
ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಅರಂಭೂರಿನಲ್ಲಿ ಬೊಲೆರೊ ವಾಹನವೊಂದು ಅಂಗಡಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿರುವ ಘಟನೆ ವರದಿಯಾಗಿದೆ.

ಮಡಿಕೇರಿ ಕಡೆಯಿಂದ ಬಂದ ಕಾರೊಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದು ಹೊಸದಾಗಿ ಕಟ್ಟುತ್ತಿದ್ದ ಅಂಗಡಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ, ಪಾಲಡ್ಕದ ಪಿ.ಆರ್. ಮಹಮ್ಮದ್ ಎಂಬವರ ನಿರ್ಮಾಣ ಹಂತದ ಅಂಗಡಿ ಕಟ್ಟಡ ಎಂದು ಹೇಳಲಾಗಿದೆ.ಚಾಲಕ ಸೇರಿದಂತೆ ಇಬ್ಬರಿಗೆ ಗಾಯವಾಗಿರುವುದಾಗಿ ತಿಳಿದುಬಂದಿದೆ.


