
ಸುಳ್ಯದ ಗಾಂಧಿನಗರದ ಏರ್ ಟೆಲ್ ಕಚೇರಿಗೆ ಕರೆನ್ಸಿ ರಿಚಾರ್ಚ್ ಗೆಂದು ಬಂದ ಯುವತಿಯೊಬ್ಬಳ ಫೋಟೋವನ್ನು ಅಲ್ಲಿರುವ ಅನ್ಯಕೋಮಿನ ಯುವಕ ತೆಗೆದಿದ್ದಾನೆ ಎಂದು ಆರೋಪಿಸಿ ಯುವತಿಯ ಮನೆಯವರು ಪೋಲಿಸ್ ದೂರು ನೀಡಿದ ಪ್ರಕರಣವೊಂದು ನಡೆದಿದ್ದು.ಯುವಕನ್ನನ್ನು ಪೋಲಿಸರು ಠಾಣೆಗೆ ಕರೆತಂದು ವಿಚಾರಿಸುತ್ತಿರುವುದಾಗಿ ತಿಳಿದು ಬಂದಿದೆ.

ಗಾಂಧಿನಗರದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯೊಬ್ಬಳು ರಿಚಾರ್ಜ್ ಗೆ ಬಂದ ಸಂದರ್ಭದಲ್ಲಿ ಕುಳಿತುಕೊಳ್ಳುವಂತೆ ಹೇಳಿದ ಯುವಕ ಯುವತಿಗೆ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿರುತ್ತಾನೆ. ಇದನ್ನು ಗಮನಿಸಿದ ಯುವತಿ ಆಕ್ಷೇಪಿಸಿರುವುದಲ್ಲದೆ ಆತನ ಮೊಬೈಲನ್ನು ಕಸಿದುಕೊಂಡು ನೋಡಿದಾಗ ಆಕೆಯ ಫೋಟೋ ಕ್ಲಿಕ್ಕಿಸಿದ್ದನ್ನು ನೋಡಿ ಗಾಬರಿಯಿಂದ ಆತನ ಮೊಬೈಲ್ ನಲ್ಲಿದ್ದ ಫೋಟೋ ಗಳನ್ನು ಡಿಲೀಟ್ ಮಾಡಿದ್ದಾಳೆ. ಬಳಿಕ ಮನೆಗೆ ಬಂದು ವಿಷಯ ತಿಳಿಸಿದ್ದಾಳೆ. ವಿಷಯ ತಿಳಿದ ಯುವತಿಯ ಮನೆಯವರು ಪೋಲಿಸ್ ದೂರು ನೀಡಿದ ಹಿನ್ನೆಲೆಯಲ್ಲಿ ಯುವಕನನ್ನು ಕರೆ ತಂದು ವಿಚಾರಣೆ ನಡೆಸುತ್ತಿರುವದಾಗಿ ತಿಳಿದು ಬಂದಿದೆ. ಘಟನೆಯ ಬಗ್ಗೆ ತಿಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸ್ ಠಾಣೆಯಲ್ಲಿ ಜಮಾಯಿಸಿದ್ದಾರೆ.
ಇದೇ ಯುವಕನ ವಿರುದ್ದ ಈ ಹಿಂದೆಯೂ ಇಂತದ್ದೇ ಪ್ರಕರಣದಲ್ಲಿ ದೂರು ದಾಖಲಾಗಿತ್ತು ಎಂದು ಹೇಳಲಾಗಿದೆ.
ಹೆಚ್ಚಿನ ವಿವರ ವಿಚಾರಣೆಯ ಬಳಿಕ ತಿಳಿದು ಬರಬೇಕಿದೆ.
