ಮನೆಯಂಗಳದ ಬಾವಿಯಲ್ಲಿ ಇದ್ದಕ್ಕಿದ್ದಂತೆ ಉಕ್ಕಿ ಬಂದ ನೀರು:ಭೂಮಿಯಾಳಕ್ಕೆ ಇಳಿದು ಹೋದ ಭಾವಿ : ಅಪಾಯದಲ್ಲಿದೆ ಕಾರ್ಮಿಕನ ಭಾವಿ: ಸರಕಾರದಿಂದ ಬೇಕಿದೆ ಸ್ಫಂದನೆ

ಮನೆಯಂಗಳದ ಬಾವಿಯಲ್ಲಿ ಇದ್ದಕ್ಕಿದ್ದಂತೆ ಉಕ್ಕಿ ಬಂದ ನೀರು:ಭೂಮಿಯಾಳಕ್ಕೆ ಇಳಿದು ಹೋದ ಭಾವಿ : ಅಪಾಯದಲ್ಲಿದೆ ಕಾರ್ಮಿಕನ ಭಾವಿ: ಸರಕಾರದಿಂದ ಬೇಕಿದೆ ಸ್ಫಂದನೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಭಾವಿಯೊಂದು ಇದ್ದಕಿದ್ದಂತೆ ಕುಸಿದು ಹೋದ ಘಟನೆ ನಡೆದಿದೆ.ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರುನಿವಾಸಿ  ಸುಳ್ಯದಲ್ಲಿ ಬೈಕ್ ಗ್ಯಾರೇಜ್ ನಡೆಸುತ್ತಿರುವ ಆನಂದರವರ ಮನೆಯ ಆವರಣದಲ್ಕಿ ಈ ಘಟನೆ ನಡೆದಿದೆ,   ಇದರಿಂದ ಅದರ ಸಮೀಪದಲ್ಲಿರುವ ಮನೆಗೆ ಹಾನಿಯಾಗಬಹುದೆಂಬ ಆತಂಕದಲ್ಲಿದ್ದು ಸರಕಾರದಿಂದ  ಸ್ಪಂದನೆ ಬೇಕಿದೆ ಎಂದು ಅವರು ಅವಲತ್ತುಕೊಂಡಿದ್ದಾರೆ.

ಆನಂದ ಎಂಬವರ ಮನೆಯಂಗಳದಲ್ಲಿರುವ ಬಾವಿಯಲ್ಲಿ ಇತ್ತೀಚೆಗೆ ನೀರು ಸಂಪೂರ್ಣವಾಗಿ ಬತ್ತಿಹೋಗಿತ್ತು. ನಿನ್ನೆ ಬೆಳಗ್ಗೆ ಇದ್ದಕ್ಕಿದ್ದಂತೆ ಬಾವಿಯಲ್ಲಿ ನೀರು ತುಂಬುತ್ತಿದ್ದು ರಿಂಗ್ ಅಳವಡಿಸಿದವರೆಗೂ ನೀರು ತುಂಬಿ ಒಳ ಭಾಗದಲ್ಲಿ ಮಣ್ಣು ಕುಸಿಯಲಾರಂಭಿಸಿದೆ.ಎಂಟು ರಿಂಗ್ ಮತ್ತು ಪಂಪ್ ಸೆಟ್ಟ್ ಗಳು ಮಣ್ಣಿನೊಳಗೆ ಕುಸಿದು ಹೋಗಿದೆ. ಈ ಘಟನೆಗೆ  ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ರಾಜ್ಯ