
ಸುಳ್ಯ ತಾಲೂಕಿನ ಹಲವು ಭಾಗದಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗುತ್ತಿರುವುದರ ಬಗ್ಗೆ ಆಗಾಗ ವರದಿಯಾಗುತ್ತಲೇ ಇದೆ.ಮೊನ್ನೆಯಷ್ಟೇ ಅರಂತೋಡು ಭಾಗದ ಅಡ್ಕಬಳೆ ಎಂಬಲ್ಲಿ ದನದ ಕರುವೊಂದನ್ನು ಚಿರತೆ ಬೇಟೆಯಾಡಿತ್ತು.ಇದು ಅಲ್ಲಿನ ಗ್ರಾಮಸ್ಥರಲ್ಲಿ ಆತಂಕವನ್ನೇ ಸೃಷ್ಟಿ ಮಾಡಿತ್ತು.

ಬಳಿಕ ಮರ್ಕಂಜ – ಮಡಪ್ಪಾಡಿ ಭಾಗದ ಶೆಟ್ಟಿಮಜಲು ಎಂಬಲ್ಲಿ ಸಾಕು ನಾಯಿಗಳನ್ನು,ದನಗಳನ್ನು ಚಿರತೆ ಬೇಟೆಯಾಡಿರೋದು ಕೂಡ ಅಲ್ಲಿನ ಜನರ ನಿದ್ದೆಗೆಡಿಸುವಂತೆ ಮಾಡಿತ್ತು.ಇದೀಗ ಮತ್ತೆ ಅರಂತೋಡು ಗ್ರಾಮ ಕಿರ್ಲಾಯ ರಸ್ತೆಯಲ್ಲಿ ರಾತ್ರಿ ವೇಳೆ ಆನೆ ಸಂಚಾರ ಮಾಡಿರುವ ಬಗ್ಗೆ ವರದಿಯಾಗಿದ್ದು ಇದರಿಂದಾಗಿ ಆ ರಸ್ತೆಯಲ್ಲಿ ಸಂಚಾರ ಮಾಡುವ ಜನರು ಸಹಜವಾಗಿ ಭಯಭೀತರಾಗಿದ್ದಾರೆ.ಈ ಬಗ್ಗೆ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
