
ಸಮುದಾಯದಲ್ಲಿ ಸಂಸ್ಕಾರ, ಸಂಸ್ಕೃತಿ ಉಳಿಯಬೇಕು. ಪರಸ್ಪರ ಸಂಬಂಧ ಬೆಸೆಯಬೇಕು. ಸಂಘಟನೆಗಳ ಕಾರ್ಯಕ್ರಮಗಳಿಂದ ಸಂಬಂಧ ಬೆಸೆಯಬೇಕು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರು ಆದ ಡಿ.ವಿ. ಸದಾನಂದ ಗೌಡ ಅವರು ಹೇಳಿದರು.

ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ (ರಿ) ಬೆಂಗಳೂರು ಇದರ ವತಿಯಿಂದ ಸ್ನೇಹ ಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ನಮ್ಮನೆ ಸಾಂಸ್ಕೃತಿಕ ಕಲಾಕೇಂದ್ರ ಲಗ್ಗೆರೆ ಇಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೊಡಗಿನ ಬಾಂಧವರಿಗೆ ಊರಿನ ಮೇಲೆ ಪ್ರೀತಿ ಜಾಸ್ತಿ. ಯಾವ ಪ್ರದೇಶದಲ್ಲಿದ್ದರೂ ಆಚರಣೆ, ಸಂಸ್ಕೃತಿ, ಸಂಸ್ಕಾರಗಳನ್ನು ಗೌರವಿಸುತ್ತಾರೆ.

ರಾಜ್ಯದ ಅತಿ ದೊಡ್ಡ ಸಂಘ ಒಕ್ಕಲಿಗರದ್ದು ಎನ್ನುವುದು ಹೆಮ್ಮೆಪಡುವಂತದ್ದು. ಆಧುನಿಕತೆಗೆ ಮಾರು ಹೋದಂತೆ ಆಚರಣೆಗಳು ಕಡಿಮೆಯಾಗುತ್ತಿದೆ. ಸಮಾಜದ ಆಧಾರ ಸ್ತಂಭಗಳು ಸಂಸ್ಕೃತಿ, ಭಾಷೆಗಳು, ವಿಶ್ವಾಸ ಮತ್ತು ಪ್ರೀತಿಯನ್ನು ಪೋಷಕರು ಮಕ್ಕಳಿಗೆ ನೀಡಬೇಕು. ಶಿಕ್ಷಣದಲ್ಲಿ ಛಾಪೂ ಮೂಡಿಸಿ ಒಕ್ಕಲಿಗ ಸಮಾಜವು ಪ್ರತಿ ಕ್ಷೇತ್ರದಲ್ಲೂ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಪಳಂಗಪ್ಪ ಪಾಣತ್ತಲೆ ಅಧ್ಯಕ್ಷರು ಗೌಡ ಸಮಾಜ ಬೆಂಗಳೂರು ಇವರು ವಹಿಸಿದ್ದರು.ಸಾಧಕ ವಿಧ್ಯಾರ್ಥಿಗಳಿಗೆ ಪುರಸ್ಕಾರ ನಡೆಯಿತು. ಜಾದೂ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದೆವು.
ವೇದಿಕೆಯಲ್ಲಿ ಕೆ.ಎಂ ಸುಲೋಚನಾ ಧನಂಜಯ ಅಡ್ಪಂಗಾಯ ವಾಣಿಜ್ಯ ತೆರಿಗೆಗಳ ಅಪಾರ ಆಯುಕ್ತರು , ಶಿವರಾಂ ಕಾರಂತ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ ಪ್ರಾಂಶುಪಾಲರಾದ ದಾಮೋದರ ಕಣಜಾಲು , ಸುಮಿತ ನಂಗಾರು ಉಪ ಆಯುಕ್ತರು ಅಬಕಾರಿ ಇಲಾಖೆ, ಶ್ರೀ ನಾಗೇಶ್ ಉಳುವಾರು ಬಂಟೋಡಿ, ಶ್ರೀ ರಾಧಾಕೃಷ್ಣ ಗುತ್ತಿಗಾರು ಮೂಲೆ, ಶಶಿಪ್ರಭಾ ಮಡ್ತಿಲ, ಸೋಮಣ್ಣ ಕುಂಭಗೌಡನ, ದಯಾನಂದ ಕುಂಬ್ಲಾಡಿ ಇತರರು ಇದ್ದರು. ವಿನೋದ್ ಮೂಡಗದ್ದೆ ಮತ್ತು ಉಳುವಾರು ಬಂಟೋಡಿ ನಿರೂಪಿಸಿದರು.

