ಸುಳ್ಯ ನಗರಪಂಚಾಯತ್         ನಲ್ಲಿ ಪ್ರತಿಧ್ವನಿಸಿದ ಬ್ಯಾನರ್ ಹರಿದ ಪ್ರಕರಣ : ಸರ್ವ ಪಕ್ಷದ ಮುಖಂಡರಿಂದ ಖಂಡನೆ.

ಸುಳ್ಯ ನಗರಪಂಚಾಯತ್ ನಲ್ಲಿ ಪ್ರತಿಧ್ವನಿಸಿದ ಬ್ಯಾನರ್ ಹರಿದ ಪ್ರಕರಣ : ಸರ್ವ ಪಕ್ಷದ ಮುಖಂಡರಿಂದ ಖಂಡನೆ.

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಭಕೋರುವ ಬ್ಯಾನರ್ ಹಾನಿಮಾಡಿದ ಪ್ರಕರಣಕ್ಕೆ ಸಂಭಂದಿಸಿ
ನಗರ ಪಂಚಾಯತ್ ಸದಸ್ಯರಿಂದ ಪಕ್ಷಾತೀತವಾಗಿ ಜ್ಯಾತ್ಯಾತಿವಾಗಿ ಖಂಡನೆ ವ್ಯಕ್ತವಾಗಿದೆ.
ಸುಳ್ಯದಲ್ಲಿ ಹಾಕಿದ್ದ ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಭಕೋರುವ ಬ್ಯಾನರ್ ಹಾನಿ ಮಾಡಿದ ಕಿಡಿಗೇಡಿಗಳು ವಿಕೃತಿ ಮೆರೆದಿರುವುದನ್ನು ಖಂಡಿಸುವುದರ ಜೊತೆಗೆ ಬ್ಯಾನರ್ ಹಾನಿ ಮಾಡಿದ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕು. ಈ ಕುರಿತು ನ.ಪಂ. ನಲ್ಲಿ ನಿರ್ಣಯ ಬರೆದು ಪೋಲೀಸ್ ಇಲಾಖೆಗೆ ಕಳುಹಿಸಬೇಕು ಎಂದು ನ.ಪಂ.ನಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸದಸ್ಯರುಗಳಾದ ಕೆ.ಎಸ್. ಉಮ್ಮರ್, ಎಂ. ವೆಂಕಪ್ಪ ಗೌಡ ಹಾಗೂ ಶರೀಫ್ ಕಂಠಿ ಆಗ್ರಹಿಸಿದ್ದಾರೆ. ಜ.೬ರಂದು ನಡೆದ ಸಭೆಯಲ್ಲಿ ಅವರು ಆಗ್ರಹಿಸಿದರು.
ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಎಸ್. ಉಮ್ಮರ್ ಬ್ಯಾನರ್ ಹರಿದಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕು. ಊರಿನ ಸೌಹಾರ್ದತೆಗೆ ಧಕ್ಕೆ ತರುವವರನ್ನು ಸುಮ್ಮನೆ ಬಿಡಬಾರದು” ಎಂದು ಹೇಳಿದರೆ, ಸದಸ್ಯರುಗಳಾದ ಎಂ.ವೆಂಕಪ್ಪ ಗೌಡ ಹಾಗೂ ಶರೀಫ್ ಕಂಠಿಯವರು, ಶುಭಾಶಯ ಬ್ಯಾನರ್ ಹರಿದಿರುವುದು ಸರಿಯಲ್ಲ. ಜಾ ತಿ – ಧರ್ಮ ನೋಡದೇ ನಿರ್ಧಾಕ್ಷಿಣ್ಯ ಕ್ರಮ ಆಗಲಿ ಎಂದು ಹೇಳಿದರು. ಅವರು ಮಾತಿಗೆ ಸಭೆಯಲ್ಲಿದ್ದ ಎಲ್ಲರೂ ಸಹಮತಿ ತೋರಿದ್ದಾರೆ

ರಾಜ್ಯ