
ಜ.13 ರಂದು ಸುಳ್ಯ ರೋಟರಿ ಸಮುದಾಯಭವನದ ಮೇಲ್ಚಾವಣಿಯ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಯೋಜನಾ ಸಮಿತಿ ಅಧ್ಯಕ್ಷರಾದ ರೋಟರಿ ಸವಣೂರು ಸೀತಾರಾಮ ರೈ ತಿಳಿಸಿದ್ದಾರೆ ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಸ್ಟಿ ನಡೆಸಿ ಮಾತನಾಡಿ ರೋಟರಿ ಕ್ಲಬ್ ಸುಳ್ಯ, ರೋಟರಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ 2023-24 ನೇ ಸಾಲಿನ ಸೇವಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ರೋಟರಿ ಸಮುದಾಯ ಭವನದ ಮೇಲ್ಛಾವಣಿಯ ಸಭಾಭವನವನ್ನು ರೋಟರಿ ಜಿಲ್ಲಾ ಗವರ್ನರ್ ಹೆಚ್.ಆರ್.ಕೇಶವ ಉದ್ಘಾಟಿಸಲಿದ್ದಾರೆ, ಅಲ್ಲದೆ ರೋಟರಿ ಜಿಲ್ಲಾ ಯೋಜನೆಯಡಿ ಸುಳ್ಯ ಆಸುಪಾಸಿನ 10 ಅಂಗನವಾಡಿ ಕೇಂದ್ರಗಳಿಗೆ ಚಪ್ಪಲ್ ಸ್ಟ್ಯಾಂಡ್ ವಿತರಣೆ ನಡೆಸಲಾಗುತ್ತದೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಎ.ಒ.ಎಲ್.ಇ. ಅಧ್ಯಕ್ಷ ಡಾ.ಕೆ.ವಿ.ಚಿದಾನಂದ,ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ರೋಟರಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಗಿರಿಜಾಶಂಕರ್ ತುದಿಯಡ್ಕ ಭಾಗವಹಿಸಲಿದ್ದಾರೆ. ರೋಟರಿ ಕ್ಲಬ್ ಸುಳ್ಯ ಸಿ.ಟಿ. ಹಾಗೂ ಇನ್ನರ್ ವ್ಹೀಲ್ ಕ್ಲಬ್ ನವರು ಸಹಯೋಗ ದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.


ರೋಟರಿ ಕ್ಲಬ್ ಅಧ್ಯಕ್ಷ ಆನಂದ ಖಂಡಿಗರು ಮಾತನಾಡಿ,ರೋಟರಿ ಕ್ಲಬ್ ವತಿಯಿಂದ ಈಗಾಗಲೇ ಸುಳ್ಯ ಚೆನ್ನಕೇಶವ ದೇಸ್ಥಾನದ ಎದುರು ಇಂಟರ್ ಲಾಕ್ ಅಳವಡಿಸಲಾಗಿದೆ, ಇದರ ಮುಂದುವರಿದ ಭಾಗವಾಗಿ ಸುಮಾರು 3000 ಚದರ ಅಡಿಗಳ ಸುಸ್ಸಜ್ಜಿತ ಸಭಾಂಗಣ ನಿರ್ಮಾಣವಾಗಿದೆ ಮತ್ತು ಹಲವು ಅಂಗನಾವಾಡಿಗಳ ಅಭಿವೃದ್ದಿಗಾಗಿ ಉಪಯೋಗ ವಾಗಬಲ್ಲ ಸಲಕರಣೆ ವಿತರಿಸುವ ಕಾರ್ಯಕ್ರಮವಿದೆ ಮುಂದೆಯೂ ರೋಟರಿ ಕ್ಲಬ್ ವತಿಯಿಂದ ಸಮಾಜಮುಖಿ ಕೆಲಸಗಳು ನಡೆಯಲಿದೆ ಎಂದು ಹೇಳಿದರು .ಸುದ್ದಿಗೋಷ್ಠಿಯಲ್ಲಿ ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕ ಗಿರಿಜಾಶಂಕರ್ ತುದಿಯಡ್ಕ, ಕಾರ್ಯದರ್ಶಿ ರೊ.ಕಸ್ತೂರಿಶಂಕರ್ ನಿಸರ್ಗ, ಯೋಜನಾ ಸಮಿತಿ ಕಾರ್ಯದರ್ಶಿ ಹರಿರಾಯ ಕಾಮತ್, ಜತೆ ಕಾರ್ಯದರ್ಶಿ ಸನತ್ ಪಿ.ಆರ್., ಖಜಾಂಚಿ ಪ್ರಭಾಕರನ್ ನಾಯರ್ ಸ್ವಾಗತ್, ರೋಟರಿ ಸಮುದಾಯ ಸೇವೆ ನಿರ್ದೇಶಕರಾದ ಬಾಲಕೃಷ್ಣ ಎಸ್.ಬಿ. ಲ್ಯಾಬ್, ರೋಟರಿ ಸುಳ್ಯ ನಿಯೋಜಿತ ಅಧ್ಯಕ್ಷೆ ಯೋಗೀತಾ ಗೋಪಿನಾಥ್, ಡಾ.ಪುರುಷೋತ್ತಮ ಕೆ.ಜಿ., ಜೆ.ಕೆ.ರೈ, ಬಾಪೂ ಸಾಹೇಬ್ ಅರಂಬೂರು,ಮೊದಲಾದವಿರಿದ್ದರು.

