ಕುರುಂಜಿ ಗೌಡರು ಸರಳತೆಯ ಸಾಕಾರಮೂರ್ತಿಯಾಗಿದ್ದರು: ಎಂ.ಬಿ.ಪುರಾಣಿಕ್ :ಕೆ.ವಿ.ಜಿ.ಸಾಧನಾಶ್ರೀ ಪ್ರಶಸ್ತಿಗೆ ಭಾಜನರಾದಇಸ್ರೋ ವಿಜ್ಞಾನಿ ಶಂಭಯ್ಯ ಕೊಡಪಾಲ ಮತ್ತು ಹಿರಿಯ ವೈದ್ಯ ಡಾ.ರಘುರಾಮ ಮಾಣಿಬೆಟ್ಟು.

ಕುರುಂಜಿ ಗೌಡರು ಸರಳತೆಯ ಸಾಕಾರಮೂರ್ತಿಯಾಗಿದ್ದರು: ಎಂ.ಬಿ.ಪುರಾಣಿಕ್ :ಕೆ.ವಿ.ಜಿ.ಸಾಧನಾಶ್ರೀ ಪ್ರಶಸ್ತಿಗೆ ಭಾಜನರಾದ
ಇಸ್ರೋ ವಿಜ್ಞಾನಿ ಶಂಭಯ್ಯ ಕೊಡಪಾಲ ಮತ್ತು ಹಿರಿಯ ವೈದ್ಯ ಡಾ.ರಘುರಾಮ ಮಾಣಿಬೆಟ್ಟು.

ಸುಳ್ಯದಂತಹ ಹಳ್ಳಿಯಲ್ಲಿದ್ದು, ಉತ್ತಮ ಕೃಷಿಕನಾಗಿ,ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ, ಸಮಾಜದ ಮಕ್ಕಳಿಗಾಗಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಕುಗ್ರಾಮವನ್ನೂ ವಿದ್ಯಾಕ್ಷೇತ್ರ ವನ್ನಾಗಿಸಿದ ದಾರ್ಶನಿಕ ವ್ಯಕ್ತಿತ್ವ ಕುರುಂಜಿಯವರದ್ದು ಎಂದು ಮಂಗಳೂರು ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪುರಾಣಿಕ್ ಹೇಳಿದ್ದಾರೆ.
ಡಾ. ಕುರುಂಜಿ ವೆಂಕಟ್ರಮಣ ಗೌಡರ 95ನೇ ಜಯಂತ್ಯೋತ್ಸವದ ಅಂಗವಾಗಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ನಡೆದ ಕೆ.ವಿ.ಜಿ ಸುಳ್ಯ ಹಬ್ಬ ಆಚರಣೆ ಕಾರ್ಯಕ್ರಮದ ಎರಡನೇ ಕಾರ್ಯಕ್ರಮದಲ್ಲಿ ಕೆವಿಜಿ ಸಂಸ್ಮರಣಾ ಭಾಷಣ ಮಾಡಿ ಅವರು ಮಾತನಾಡಿದರು. ಕುರುಂಜಿಯವರು ಸಾಧನೆ ಮಾಡಿದವರಾದರೂ ಅವರಲ್ಲಿದ್ದ ಸರಳತೆ, ಸಂಸ್ಕಾರಯುತ ಜೀವನದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು ಎಂದು ಹೇಳಿದರು.
ಕೆ ವಿ.ಜಿ ಸಾಧನಾಶ್ರೀ ಪ್ರಶಸ್ತಿಯನ್ನು ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಶಂಭಯ್ಯ ಕೊಡಪಾಲ ಹಾಗೂ ಸುಳ್ಯದ ಖ್ಯಾತ ವೈಧ್ಯ ಡಾ. ರಘುರಾಮ ಮಾಣಿಬೆಟ್ಟುರವರಿಗೆ ನೀಡಲಾಯಿತು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ ಟಿ ವಿಶ್ವನಾಥ್ ರವರನ್ನು ಸನ್ಮಾನಿಸಲಾಯಿತು.


ಶಾಸಕಿ ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಯಾಗಿ
ಮಾತನಾಡಿದರು.ಸಭೆಯ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ.ಕೆ.ವಿ.ಚಿದಾನಂದ ವಹಿಸಿದ್ದರು.


ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಕಾರ್ಯದರ್ಶಿ ದಿನೇಶ್ ಅಂಬೆಕಲ್ಲು, ಕೋಶಾಧಿಕಾರಿ ಜನಾರ್ಧನ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು

ರಾಜ್ಯ