ಮೀಫ್ ವತಿಯಿಂದ ಶೈಕ್ಷಣಿಕ ಸೇವೆಗಾಗಿ ಎಂ. ಬಿ. ಸದಾಶಿವ ರಿಗೆ ಮಂಗಳೂರಿನಲ್ಲಿ ಸನ್ಮಾನ

ಮೀಫ್ ವತಿಯಿಂದ ಶೈಕ್ಷಣಿಕ ಸೇವೆಗಾಗಿ ಎಂ. ಬಿ. ಸದಾಶಿವ ರಿಗೆ ಮಂಗಳೂರಿನಲ್ಲಿ ಸನ್ಮಾನ

ಸುಳ್ಯದಲ್ಲಿ ಸಾಂದೀಪಿನಿ ಬುದ್ದಿ ಮಾಂದ್ಯ ಮಕ್ಕಳ ವಿಶೇಷ ಶಾಲೆಯನ್ನು ಸ್ಥಾಪಿಸಿ ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ಲಯನ್ಸ್ ಮಾಜಿ ರಾಜ್ಯಪಾಲ, ತರಬೇತುದಾರ ಎಂ. ಬಿ. ಸದಾಶಿವ ರವರನ್ನು ದ. ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ )ವತಿಯಿಂದ ಇಂದು ಮಂಗಳೂರಿನ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ಅಂತರ್ ಜಿಲ್ಲಾ “ಟ್ಯಾಲೆಂಟ್ ಹಂಟ್” ಸಮಾರಂಭ ದಲ್ಲಿ ಸನ್ಮಾನಿಸಲಾಯಿತು
ಮಂಗಳೂರು ನಗರ ಪೊಲೀಸ್ ಕಮಿಷ ನರೇಟ್ ನ ಡಿ. ಸಿ. ಪಿ. ಸಿದ್ಧಾರ್ಥ ಗೋಯೇಲ್ ಸನ್ಮಾನಿಸಿದರು
ಈ ಸಂದರ್ಭದಲ್ಲಿ ಮಂಗಳೂರು ಸುಲ್ತಾನ್ ಗೋಲ್ಡ್ & ಜ್ಯುವೆಲ್ಸ್ ಎಂ. ಡಿ. ಅಬ್ದುಲ್ ರವೂಫ್, ಮೀಫ್ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ, ಉಪಾಧ್ಯಕ್ಷ ಕೆ. ಎಂ. ಮುಸ್ತಫ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ದ. ಕ. ಮತ್ತು ಉಡುಪಿ ಜಿಲ್ಲೆಗಳ ಅಂತರ್ ಪ್ರೌಢ ಶಾಲಾ ಕೌನ್ ಬನೇಗಾ ಮಾದರಿಯ ಕ್ವಿಝ್ ಸ್ಪರ್ಧೆಯನ್ನು ಎಂ. ಬಿ. ಸದಾಶಿವರು ನಡೆಸಿಕೊಟ್ಟರು
ಶೈಕ್ಷಣಿಕ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ರವರನ್ನು ಪ್ರಥಮ ಬಾರಿಗೆ ಸುಳ್ಯಕ್ಕೆ ಕರೆಸಿ ಸಾಂದೀಪನಿ ಶಾಲೆಯಲ್ಲಿ ಸನ್ಮಾಸಿರುವುದನ್ನು ಇಲ್ಲಿ ಸ್ಮರಿಸಬಹುದು

ರಾಜ್ಯ