ಸುಳ್ಯ ಗಾಂಧೀನಗರ ಕಾರುಚಾಲಕನ ಅವಾಂತರಕ್ಕೆ ಓರ್ವ ಸ್ಕೂಟರ್ ಸವಾರ ಸೇರಿದಂತೆ ಮೂವರು ರಿಕ್ಷಾ ಚಾಲಕರಿಗೆ ಗಂಭೀರ ಗಾಯ: ಒಂದು ಸ್ಕೂಟರ್ ಸೇರಿದಂತೆ ಮೂರು ರಿಕ್ಷ ಜಖಂ

ಸುಳ್ಯ ಗಾಂಧೀನಗರ ಕಾರುಚಾಲಕನ ಅವಾಂತರಕ್ಕೆ ಓರ್ವ ಸ್ಕೂಟರ್ ಸವಾರ ಸೇರಿದಂತೆ ಮೂವರು ರಿಕ್ಷಾ ಚಾಲಕರಿಗೆ ಗಂಭೀರ ಗಾಯ: ಒಂದು ಸ್ಕೂಟರ್ ಸೇರಿದಂತೆ ಮೂರು ರಿಕ್ಷ ಜಖಂ

ಸುಳ್ಯ ಗಾಂದೀನಗರದ ಮುಖ್ಯ ರಸ್ಥೆಯಿಂದ ಶಾಲಾ ವಠಾರಕ್ಕೆ ತಿರುಗುವ ರಸ್ಥೆಯಲ್ಲಿ ಕಾರು ಚಾಲಕನೋರ್ವ ಸ್ಕೂಟರ್ ಗೆ ಡಿಕ್ಕಿ ಹೊಡೆದು, ಪಾರ್ಕಿಂಗ್ ನಲ್ಲಿದ್ದ ರಿಕ್ಷಾಗಳಿಗೂ ಗುದ್ದಿ ನಾಲ್ವರು ಗಂಭೀರ ಗಾಯವಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಡಿ.೨೩ ರ ಸಂಜೆ ನಡೆದಿದೆ, ಅರಂಬೂರು ಕಡೆಯಿಂದ ಬಂದ ಶಿಪ್ಟ್ ಕಾರು, ಗಾಂದೀ ನಗರದಲ್ಲಿ ನಿಂತ ಸ್ಕೂಟರ್ ಗೆ ಡಿಕ್ಕಿ ಹೊಡೆದು ಏಕಾಏಕಿ ತಿರುಗಿ ರಿಕ್ಷಾ ಪಾರ್ಕಿಂಗ್ ಗೆ ನುಗ್ಗಿ ನಿಂತಿದ್ದ ರಿಕ್ಷಾ ಗಳಿಗೆ ಡಿಕ್ಕಿ ಹೊಡೆದಿದೆ. ಕಾರು ಚಾಲಕನನ್ನು ಶರೀಪ್ ಎಂದು ಗುರುತಿಸಲಾಗಿದೆ., ಗಾಯಗೊಂಡ ರಿಕ್ಷಾ ಚಾಲಕರನ್ನು ಆಸಿಪ್ ಕಲ್ಲುಮುಟ್ಲು, ಪ್ರಸಾದ್ ನಡುಬೈಲು ಪೆರಾಜೆ, ಹಾಗೂ ಅಜೇಶ್ ಎಂದು ಗುರುತಿಸಲಾಗಿದೆ, ಇನ್ನು ಕಾಲಿಗೆ ಗಂಭೀರ ಗಾಯ ವಾಗಿರುವ ಸ್ಕೂಟರ್ ಚಾಲಕನ ವಿವರ ತಿಳಿದು ಬಂದಿಲ್ಲ, ಕಾರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ, ಹೆಚ್ಚಿನ ವಿವರ ತಿಳಿದು ಬರಬೇಕಾಗಿದೆ.

ರಾಜ್ಯ