
ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಉಳುವಾರು ಎಳ್ಪಕಜೆ ಎಂಬಲ್ಲಿ ಮನೆಯೊಂದು ಹೊತ್ತಿಉರಿದು ಬಸ್ಮವಾದ ಬೆನ್ನಲ್ಲೆ ಮನೆಯ ಒಡತಿ ಪೋಲಿಸ್ ದೂರು ನೀಡಿದ್ದು ತನ್ನ ಪುತ್ರನೇ ಮನೆಗೆ ಬೆಂಕಿ ಹಚ್ಚಿರುವ ಸಂಶಯ ವ್ಯಕ್ತಪಡಿಸಿರುವ ಘಟನೆ ವರದಿಯಾಗಿದೆ, ಅರಂತೋಡಿನ ಉಳುವಾರು ಎಳ್ಪಕಜೆ ನಳಿನಿ ಎಂಬವರು ಪೋಲಿಸ್ ದೂರು ನೀಡಿದ್ದು, ತನ್ನ ಮಗ ಗಣೇಶ್ ಎಂಬಾತ ಮದ್ಯವ್ಯಸನಿಯಾಗಿದ್ದ, ಹಾಗೂ ಪ್ರಾಣ ಬೆದರಿಕೆ ಒಡ್ಡಿದ್ದ ಹಿನ್ನಲೆಯಲ್ಲಿ ಕೆಲವು ಸಮಯಗಳಿಂದ ಸುಳ್ಯದಲ್ಲಿ ವಾಸವಿದ್ದು, ಡಿ . ೧೭ ರಂದು ಅರಂತೋಡಿನ ತಮ್ಮ ಮನೆಗೆ ಬೆಂಕಿ ಬಿದ್ದು ಉರಿಯುತ್ತಿರುವ ಬಗ್ಗೆ ನೆರೆ ಮನೆಯವರಿಂದ ತಿಳಿಸಿದ ಹಿನ್ನಲೆ ಯಲ್ಲಿ ಹೋಗಿ ನೋಡಲಾಗಿ ಮನೆ , ಕೊಟ್ಟಿಗೆ ಬೆಂಕಿಗೀಡಾಗಿದ್ದು, ಮಗ ಗಣೇಶನೇ ಬೆಂಕಿ ಹಚ್ಚಿರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿ ಪೋಲಿಸ್ ದೂರು ನೀಡಿದ್ದಾರೆ.
