
ಡಿ.25 ಮತ್ತು 26ರಂದು ಸುಳ್ಯದಲ್ಲಿ ಕೆ ವಿ ಜಿ ಸುಳ್ಯ ಹಬ್ಬ ಆಚರಣೆಯ ಪ್ರಯುಕ್ತ ಸುಳ್ಯ ಚೆನ್ನಕೇಶವ ದೇವಸ್ಥಾನ ಮುಂಭಾಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ಮತ್ತು ಕೆ ವಿ ಜಿ ಸಾಧನಾ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ ಹಾಗೂ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸಮಾಜ ಸೇವಾ ಕಾರ್ಯಕ್ರಮದಡಿ ನೀಡುವ ಒಂದು ಲಕ್ಷ ಸಹಾಯ ಧನದೊಂದಿಗೆ ಜಯನಗರದಲ್ಲಿ ನಿರ್ಮಾಣ ಮಾಡಲಾಗಿರುವ ಮನೆಯನ್ನು ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆಯಲಿದೆ ಎಂದು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ. ಅವರು.ಡಿ ೧೬ ರಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೊಸ್ಟಿ ನಡೆಸಿ ಮಾತನಾಡಿ ವಿವರ ತಿಳಿಸಿದರು,

ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ ಜಯಂತ್ಯೋತ್ಸವದ ಅಂಗವಾಗಿ ನಿರಂತರ ೧೩ ವರ್ಷಗಳಿಂದ ಸುಳ್ಯ ಹಬ್ಬವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು , ಈ ಬಾರಿ ಅವರ 95. ಜಯಂತ್ಯೋತ್ಸವವನ್ನು ಸಡಗರದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಇದರ ಅಂಗವಾಗಿ ಡಿ ೨೫ ರಂದು ತಾಲೂಕು ಮಟ್ಟದ ಕ್ರೀಡಾಕೂಟವನ್ನು ಸಾರ್ವಜನಿಕರಿಗೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಲಾಗಿದ್ದು, ಇದರ ಉದ್ಘಾಟನೆಯನ್ನು ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರಪ್ರಸಾದ್ ತುದಿಯಡ್ಕ ನೆರವೇರಿಸಲಿದ್ದು,ಅಧ್ಯಕ್ಷತೆಯನ್ನು ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಲಿದ್ದಾರೆ, ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವ ಅಧ್ಯಕ್ಷ ಡಾ ಕೆ ವಿ ಚಿದಾನಂದ ಗೌರವ ಉಪಸ್ಥಿತಿಯಿರಲಿದ್ದು, ಸ.ಪ್ರ .ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಕೊಯಿಂಗಾಜೆ ಕ್ರೀಡಾಕೂಟಕ್ಕೆ ಚಾಲನೆ ನೀಡಿಲಿದ್ದಾರೆ. ಅದೇ ದಿನ ಸಂಜೆ ರೋಟರಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ನೃತ್ಯ ವೈಭವ ನಡೆಯಲಿದ್ದು, ಬಳಿಕ ಯುವ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ,ಪಶು ವೈದ್ಯಕೀಯ ಕ್ಷೇತ್ರದಲ್ಲಿ ,ಡಾ ನಿತಿನ್ ಪ್ರಭು, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹರಿಕೃಷ್ಣ ರೈ, ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅರವಿಂದ ಚೊಕ್ಕಾಡಿ, ಉದ್ಯಮ ಕ್ಷೇತ್ರದಲ್ಲಿ ಎಸ್ ಆರ್ ಕೇಶವ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೇಜಸ್ವಿ ಕಡಪಳ, ವೈದ್ಯಕೀಯ ಕ್ಷೇತ್ರದಲ್ಲಿ , ಡಾ. ತಾರಾ ನಂದನ್ ರನ್ನು ಅಭಿನಂದಿಸುವ ಕಾರ್ಯಕ್ರಮವಿದ್ದು ,ಅಭಿನಂದನೆಯನ್ನು ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ರಾಜೇಂದ್ರ ಭಟ್ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಲಿದ್ದಾರೆ ಅದ್ಯಕ್ಷತೆಯನ್ನು ಚಂದ್ರ ಶೇಖರ ಪೇರಾಲು ವಹಿಸಲಿದ್ದಾರೆ, ಡಿ 26 ರಂದು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಸಮಾಜ ಸೇವಾ ಕಾರ್ಯಕ್ರಮದಡಿ ನೀಡುವ ಒಂದು ಲಕ್ಷ ಸಹಾಯ ಧನದೊಂದಿಗೆ ಜಯನಗರದಲ್ಲಿ ನಿರ್ಮಾಣ ಮಾಡಲಾಗಿರುವ ಮನೆಯನ್ನು ಪ್ರಕೃತಿ ವಿಕೋಪದಲ್ಲಿ ಹಾನಿಗೀಡಾದ ಚಂಡೆಮೂಲೆ ಸರೋಜ ರವರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆಯಲಿದೆ, ಪದ್ಮಶ್ರೀ ಪುರಸ್ಕೃತ ಡಾ ಗಿರೀಶ್ ಭಾರದ್ವಾಜ ಮನೆಯನ್ನು ಹಸ್ತಾಂತರಿಸಲಿದ್ದು, ಮುಖ್ಯ ಅತಿಥಿಯಾಗಿ ಸುಳ್ಯ ನ.ಪಂ ಮುಖ್ಯಾಧಿಕಾರಿ ಎಂ ಹೆಚ್ ಸುಧಾಕರ,ನ ಪಂ ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕೇರಿ ಉಪಸ್ಥಿತರಿರಲಿದ್ದಾರೆ,ಸಂಜೆ ೬ ರಿಂದ ಸ.ಪ ಪೂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ, ಬಳಿಕ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವ ಅಧ್ಯಕ್ಷ ಡಾ ಕೆ ವಿ ಚಿದಾನಂದರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿ ಹಾಗೂ ಸಂಸ್ಮರಣ ಭಾಷಣವನ್ನು ಮಂಗಳೂರು ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ ಬಿ ಪುರಾಣಿಕ್ ನಡೆಸಲಿದ್ದಾರೆ.ಕಾರ್ಯಕ್ರಮದಲ್ಲಿ ಸುಳ್ಯದ ಖ್ಯಾತ ವೈದ್ಯ ಡಾ ರಘುರಾಮ ಮಾಣಿಬೆಟ್ಟು, ಮತ್ತು ಬೆಂಗಳೂರು ಇಸ್ರೋ ಸಂಸ್ಥೆ ಹಿರಿಯ ವಿಜ್ಞಾನಿ ಶಂಭಯ್ಯ ಕೊಡಪಾಲರಿಗೆ ” ಕೆವಿಜಿ ಸಾಧನಾಶ್ರೀ” ಪ್ರಶಸ್ತಿ ಪ್ರಧಾನ ನಡೆಯಲಿದೆ, ಎಂದು ವಿವರ ತಿಳಿಸಿದರು, ಡಿ. ೩೫ ಮತ್ತು ೩೬ ರ ರಾತ್ರಿ ೯ ರಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ವಿವರ ತಿಳಿಸಿದರು, ಸುದ್ದಿಗೋಷ್ಟಿಯಲ್ಲಿ ಸಂಘದ ಕೋಶಾಧಿಕಾರಿ ಜನಾರ್ಧನ ನಾಯ್ಕ, ನಿರ್ದೇಶಕರಾದ ಎನ್ ಎ ಜ್ಞಾನೇಶ್, ಗೌರವಾದ್ಯಕ್ಷ ಚಂದ್ರಕೋಲ್ಚಾರ್,, ಚಂದ್ರಶೇಖರ ನಂಜೆ,ಪ್ರಭಾಕರ ನಾಯರ್,ರಾಜು ಪಂಡಿತ್ ಮೊದಲಾದವರಿದ್ದರು.

