ಸುಳ್ಯ ಕೆ ವಿ ಜಿ ಆಡಳಿತ ಮಂಡಳಿಯಿಂದ ಉಪನ್ಯಾಸಕರ ಅಮಾನತು: ಕಾಲೇಜು ಎಕೌಂಟ್ ಪ್ರೀಝ್: ಸಂಬಳ ಬಾರದೆ ತರಗತಿ ನಡೆಸದ ಉಪನ್ಯಾಸಕರು: ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಸುಳ್ಯ ಕೆ ವಿ ಜಿ ಆಡಳಿತ ಮಂಡಳಿಯಿಂದ ಉಪನ್ಯಾಸಕರ ಅಮಾನತು: ಕಾಲೇಜು ಎಕೌಂಟ್ ಪ್ರೀಝ್: ಸಂಬಳ ಬಾರದೆ ತರಗತಿ ನಡೆಸದ ಉಪನ್ಯಾಸಕರು: ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳು ಬೀದಿಗಿಳಿದ ಪ್ರತಿಭಟನೆ ನಡೆಸಿರುವ ವಿದ್ಯಮಾನಡಿ. ೧೫ ರಂದು ನಡೆದಿದೆ, ಕೆ.ವಿ ಜಿ ಶಿಕ್ಷಣ ಸಂಸ್ಥೆಗೆ ಒಳಪಡುವ ಡೆಂಟಲ್ ಕಾಲೇಜು, ಇಂಜಿನಿಯರಿಂಗ್, ಹಾಗೂ ಐಟಿಐ ವಿದ್ಯಾರ್ಥಿಗಳು ಸಾಮೂಹಿಕವಾಗಿ ಬೀದಿಗಿಳಿದು ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿಯಲ್ಲಿನ ಆಂತರಿಕ ಗೊಂದಲದಿಂದಾಗಿ , ಕಳೆದ ಮೂರು ತಿಂಗಳಿಂದ ಪಾಠ ಪ್ರವಚನಗಳು ನಡೆಯುತ್ತಿಲ್ಲಿ ,ಉಪನ್ಯಾಸಕರುಗಳಿಗೆ ವೇತನ ದೊರೆಯದೆ ತರಗತಿಗೆ ನಡೆಸುತ್ತಿಲ್ಲ, ಕಾಲೇಜು ವಿದ್ಯಾರ್ಥಿ ಸಂಘಟನೆ ಆಗಿಲ್ಲ ವಾರ್ಷಿಕೋತ್ಸವ ನಡೆಸುತ್ತಿಲ್ಲ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಸರಕಾರದಿಂದ ದೊರೆತರೂ ಕಾಲೇಜು ಆಡಳಿತ ಮಂಡಳಿ ನೀಡಿಲ್ಲ, ಎಂಬ ಹಲವು ಆರೋಪಗಳನ್ನು ಮಾಡುತ್ತಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ,

ಒಳಜಗಳಕ್ಕೂ ವಿದ್ಯಾರ್ಥಿಗಳಿಗೂ ಸಂಭಂದವಿಲ್ಲ: ಎಸ್ ಆರ್. ರವಿ

ಈ ಸಂದರ್ಭ ಪ್ರತಿಭಟನೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಐಟಿಐ. ನೌಕರರ ಸಂಘದ ಅಧ್ಯಕ್ಷ ಎಸ್ ಆರ್ ರವಿ ಯವರು, ಕೆವಿಜಿ ಯವರು ಸಾರ್ವಜನಿಕರ ಸಹಕಾರದಲ್ಲಿ ಕಟ್ಟಿ ಬೆಳೆಸಿದ ವಿದ್ಯಾ ಸಂಸ್ಥೆಗಳಲ್ಲಿ ಇಂದು ಪಾಠಕ್ಕಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವುದು ಅತ್ಯಂತ ಶೋಚನೀಯ, ಅವರ ಕುಟುಂಬದಲ್ಲಿ ನಡೆಯುತ್ತಿರುವ ಈಗಿನ ವಿದ್ಯಾಮಾನಕ್ಕೂ ವಿದ್ಯಾರ್ಥಿಗಳಿಗೂ ಸಂಭಂದವಿಲ್ಲ ,ಇಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳಿಗೆ ಅವರ ಪೋಷಕರು ಸಾಲ ಸೋಲ ಮಾಡಿ ಲಕ್ಷಾಂತರ ಹಣ ಖರ್ಚು ಮಾಡಿ ಈ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಿದ್ದಾರೆ.ಇಲ್ಲಿ ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕಾದುದು ವಿದ್ಯಾ ಸಂಸ್ಥೆಯ ಕರ್ತವ್ಯ, ನಿಮ್ಮ ಒಳಜಗಳಗಳನ್ನು ನೀವೇ ಪರಿಹರಿಸಿಕೊಳ್ಳಿ ವಿದ್ಯಾರ್ಥಿಗಳಿಗೆ ತೊಂದರೆ ನೀಡದಂತೆ ಎಚ್ಚರಿಸಿದರು.

ರಾಜ್ಯ