ಮರ್ಕಂಜದ ಕಟ್ಟಕೋಡಿ ಚೀಮಾಡಿನಲ್ಲಿ ಚಿರತೆ ಕಾಟ

ಮರ್ಕಂಜದ ಕಟ್ಟಕೋಡಿ ಚೀಮಾಡಿನಲ್ಲಿ ಚಿರತೆ ಕಾಟ

ಹಟ್ಟಿಯಲ್ಲಿ ಕಟ್ಟಿದ್ದ ಕರು ಬಲಿ, ಸ್ಥಳೀಯರಲ್ಲಿ ಆತಂಕ.ಮರ್ಕಂಜ ಗ್ರಾಮದ ಕಟ್ಟಕೋಡಿ, ಚೀಮಾಡು ಪ್ರದೇಶಗಳಲ್ಲಿ ಕಳೆದ ವಾರದಿಂದ ಚಿರತೆ ಕಾಟ ಶುರುವಾಗಿದ್ದು ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.ಡಿ.5 ರಂದು ರಾತ್ರಿ ಚೀಮಾಡಿನಲ್ಲಿರುವ ಗಿರೀಶ ಕುದ್ಕುಳಿ ರವರ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಕರುವನ್ನು ಹೊತ್ತೊಯ್ದ ಘಟನೆ ನಡೆದಿದ್ದು ಅಡ್ತಲೆ ಸಮೀಪದ ಗಿರೀಶ್ ರವರ ನಾಯಿಯನ್ನು ಕೂಡ ಎಳೆದೊಯ್ಯಲು ಪ್ರಯತ್ನಿಸಿದೆ.

ಡಿ.12 ರಂದು ಮುಂಜಾನೆ ಕಟ್ಟಕೋ ಡಿ ಚಂದ್ರಶೇಖರ ಎಂಬವರ ರಬ್ಬರ್ ತೋಟದಲ್ಲಿ ಚಿರತೆಯು ಕಾಣ ಸಿಕ್ಕಿದೆ ಎಂದು ತಿಳಿದು ಬಂದಿದೆ.ಹಾಗಾಗಿ ಭಯಬೀತರಾದ ಕಟ್ಟಕೋಡಿ, ಚೀಮಾಡಿನಸುತ್ತಮುತ್ತಲಿನ ಜನ ಚಿರತೆ ಹಿಡಿಯಲು ಅರಣ್ಯ ಇಲಾಖೆ ಕ್ರಮವಹಿಸಿ ರೈತರ ತೊಂದರೆ ತಪ್ಪಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯ