
ಹನ್ನೊಂದು ವರ್ಷಗಳ ಹಿಂದೆ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಸೌಜನ್ಯ ಅತ್ಯಾಚಾರ ಕೊಲೆ ಆರೋಪಿಗಳ ಬಂದನಕ್ಕಾಗಿ ಭಾರೀ ಹೋರಾಟ ಮುಂದುವರಿದಿದ್ದು ಹೋರಾಟಕ್ಕೆ ಸೆಪ್ಟೆಂಬರ್ 3 ರ ಭಾನುವಾರದಂದು ಬೆಳ್ತಂಗಡಿಯಲ್ಲಿ ಉದ್ದೇಶಿಸಲಾಗಿರುವ ಬೃಹತ್ ಜನ ಸಮ್ಮೇಳನಕ್ಕೆ ಎಲ್ಲಾ ತರದ ಸಿದ್ಧತೆಗಳು ನಡೆಯುತ್ತಿದ್ದು ವಿಶೇಷ ವೆಂಬಂತೆ ಇದೇ ಮೊದಲಬಾರಿಗೆ ವಿಶ್ವವಿಖ್ಯಾತ ಮಠಗಳಲ್ಲಿ ಒಂದಾದ ಆದಿಚುಂಚನಗಿರಿ ಮಠದ ಸ್ವಾಮೀಜಿ ಎಂಟ್ರಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ ಇದು ಸೌಜನ್ಯ ಪರ ಹೋರಾಟಗಾರರ ಶಕ್ತಿಯನ್ನು ಇಮ್ಮಡಿಗೊಳಿಸಿದ್ದು, ಹೋರಾಟದಲ್ಲಿ ಆದೀ ಚುಂಚನಗಿರಿ ಮಠದ ಮಂಗಳೂರಿನ ಕಾವೂರು ಶಾಖಾ ಮಠದ ಸ್ವಾಮೀಜಿ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬೆಳ್ತಂಗಡಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಜನಪರ ಸಂಘಟನೆಗಳ ಮಹಾ ಸಭೆಗೆ ಭಾಗವಹಿಸಲಿದ್ದಾರೆ.ಇವರ ಪಾಲ್ಗೊಳ್ಳುವಿಕೆ ಸರಕಾರ ಮಟ್ಟದಲ್ಲಿ ತಲ್ಲಣ ಉಂಟು ಮಾಡಿದ್ದು, ನ್ಯಾಯದ ಹೋರಾಟದಲ್ಲಿ ಅಡ್ಡ ಗೋಡೆಯಲ್ಲಿ ದೀಪವಿಟ್ಟಂತೆ ಇದ್ದ ವಿವಿದ ರಾಜಕಾರಣಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ,


ಜಗದ್ಗುರು ಆದಿಚುಂಚನಗಿರಿಯ ಶ್ರೀ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿಯವರ ಸ್ಪಷ್ಟ ನಿರ್ದೇಶನದ ಮೇರೆಗೆ ಮಂಗಳೂರಿನ ಕಾವೂರು ಮಠದ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿಯವರು ಬರುವ ಭಾನುವಾರ ಬೆಳ್ತಂಗಡಿಯಲ್ಲಿ ನಡೆಯಲಿರುವ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಜನಪರ ಸಂಘಟನೆಗಳ ಮಹಾಸಭೆಗೆ ಭಾಗವಹಿಸಲಿದ್ದಾರೆ.
ಧರ್ಮಪಾಲನಾಥರ ಪಾಲ್ಗೋಳ್ಳುವಿಕೆಯಿಂದ ರಾಜ್ಯ ಬಹುದೊಡ್ಡ ಸಮುದಾಯವನ್ನು ಸರಕಾರ ಎದುರು ಹಾಕಿಕೊಳ್ಳಬೇಕಾದ ಅನಿವಾರ್ಯತೆ ಆಳ್ವ ಸರಕಾರಕ್ಕಿದ್ದು ಶೀಘ್ರದಲ್ಲಿ ಸರಕಾರ ತುರ್ತು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿ.