
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪಡ್ಡಂಬೈಲು ಎಂಬಲ್ಲಿ ಸುಮಾರು ಒಂದು ವರೆ ವರ್ಷದ ಚಿರತೆ ಮರಿ ಉರುಳಿಗೆ ಸಿಲುಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಉರುಳು ಇಟ್ಟಿರಬಹುದು ಎಂದು ಅನುಮಾನದಲ್ಲಿ ಇದೀಗ ಇಬ್ಬರ ಮೇಲೆ ಪ್ರಕರಣ ದಾಖಲು ಮಾಡಲಾಗಿದ್ದು ಇದೀಗ ಆರೋಪಿತರಾದ ಜಯರಾಮ ಪಡ್ಡಂಬೈಲು( 41) ಮತ್ತು ಪೃಥ್ವಿ ಪಡ್ಡಂಬೈಲು (32) ರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ. ವೈಲ್ಡ್ ಲೈಫ್ ಪ್ರೋಟೆಕ್ಟ್ ಆ್ಯಕ್ಟ್ ನಡಿಯಲ್ಲಿ ಈ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

