

ನ್ಯೂಸ್ ರೂಮ್ ಫಸ್ಟ್
ಬಾಂಜಿಕೋಡಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ದ ಬಾಂಜಿಕೋಡಿ ಶಾಲಾ ವಠಾರದಲ್ಲಿ ನಡೆಯಿತು.
2023-24 ರ ಸಾಲಿನ ನೂತನ ಅಧ್ಯಕ್ಷರಾಗಿ ಮಹಾಬಲ ಗುಂಪಕಲ್,ಉಪಾಧ್ಯಕ್ಷರಾಗಿ ಜಗದೀಶ್ ಪಲ್ಲತ್ತಡ್ಕ,
ಕಾರ್ಯದರ್ಶಿಯಾಗಿ ಚರಣ್ ಪ್ರಸಾದ್ ಬೇಂಗಮಲೆ ಸರ್ವಾನುಮತದಿಂದ ಆಯ್ಕೆಗೊಂಡರು. ಸಹ ಕಾರ್ಯದರ್ಶಿಯಾಗಿ ಅನಂತೇಶ ಬಾಂಜಿಕೋಡಿ, ಖಜಾಂಜಿಯಾಗಿ ರೋಹಿತ್ ಬಾಂಜಿಕೋಡಿ, ಹಾಗೂ
ಕ್ರೀಡಾ ಕಾರ್ಯದರ್ಶಿಯಾಗಿ ಶಶಿಧರ ಪಲ್ಲತ್ತಡ್ಕ ಅಯ್ಕೆಯಾದರು. ಅ.೧೦ ರಂದು ಅಷ್ಟಮಿ ಆಚರಣೆ ನಡೆಸಿ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ಸಾರ್ವಜನಿಕರಿಗೆ ಹಾಗೂ ಸ್ಥಳೀಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸುವುದೆಂದು ತೀರ್ಮಾನಿಸಲಾಯಿತು. ಸಭೆಯಲ್ಲಿ ಮಿತ್ರವೃಂದದ ಸದಸ್ಯರು ಹಾಜರಿದ್ದರು. ಅವಿನ್ ಕುಮಾರ್ ಸ್ವಾಗತಿಸಿ, ರೋಹಿತ್ ಬಾಂಜಿಕೋಡಿ ವಂದಿಸಿದರು.
