
ಪಾದಾಚಾರಿಗೆ ಸ್ಕೂಟಿಯೊಂದು ಡಿಕ್ಕಿ ಹೊಡೆದು,ಪಾದಾಚಾರಿ ರಸ್ತೆಗೆ ಉರುಳಿ ಬಿದ್ದರೂ ಸ್ಕೂಟಿ ಸವಾರ ವಾಹನ ನಿಲ್ಲಿಸದೆ, ಗಾಯಾಳುವನ್ನು ಉಪಚರಿಸದೆ ಪರಾರಿಯಾದ ಅಮಾನವೀಯ ಘಟನೆ ಕಲ್ಲುಗುಂಡಿಯಿಂದ ಇಂದು ವರದಿಯಾಗಿದೆ.



ಗಾಯಾಳು ಸಂಪಾಜೆ ಚೆಕ್ ಪೋಸ್ಟ್ ಬಳಿ ಗೇಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಗಾಯಾಳನ್ನು ಅಣ್ಣಿ ಕೊಯನಾಡು ಎಂದು ತಿಳಿದು ಬಂದಿದೆ. ಗುದ್ದಿದ ರಭಸಕ್ಕೆ ಕಾಲಿಗೆ ಗಾಯವಾಗಿದೆ. ಕಾಲಿನಿಂದ ರಕ್ತ ಸೋರುತ್ತಿದ್ದ ಅವರನ್ನು ಸ್ಥಳೀಯರು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು

ಎಂದು ತಿಳಿದು ಬಂದಿದೆ. ಇದೀಗ ಸ್ಕೂಟರ್ ಸವಾರನ ಪತ್ತೆಗೆ ಇಲಾಖೆ ಅಣಿಯಾಗಿದೆ.
