
ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಹಾಸ್ ಆರ್. ಅವರಿಗೆ ವರ್ಗಾವಣೆ ಯಾಗಿದ್ದು ನೂತನ ಎಸ್‌ಐ ಆಗಿ ಸಂತೋಷ್ ಬಿ.ಪಿ.ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ .
ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಸಂತೋಷ್ ಅವರಿಗೆ ಬೆಳ್ಳಾರೆ ಠಾಣೆಗೆ ವರ್ಗಾವಣೆಯಾಗಿದೆ. ಒಂದು ವರ್ಷದ ಹಿಂದೆ ಸುಹಾಸ್ ಆರ್. ಅವರು ಬೆಳ್ಳಾರೆ ಪೊಲೀಸ್ ಠಾಣೆಯ ಎಸ್‌ಐ ಆಗಿ ಆಗಮಿಸಿದ್ದರು.

