ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂಕೋರ್ಟ್‌ ತಡೆ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಟಿ ಎಂ ಶಹೀದ್ ಮತ್ತು ಸದಾನಂದ ಮಾವಜಿ.

ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂಕೋರ್ಟ್‌ ತಡೆ ನೀಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಟಿ ಎಂ ಶಹೀದ್ ಮತ್ತು ಸದಾನಂದ ಮಾವಜಿ.

ರಾಹುಲ್ ಗಾಂಧಿಯ ಅವರ ಸಂಸತ್ ಸದಸ್ಯ ಸ್ಥಾನಕ್ಕೆ ಅಯೋಗ್ಯ ಮಾಡಿದ ಸೂರತ್ ಕೋರ್ಟ್ ಗರಿಷ್ಟ ಶಿಕ್ಷೆ ತೀರ್ಮಾನವನ್ನು ಕಟು ಶಬ್ದದಿಂದ ವಿಮರ್ಶಿಸಿ ಗುಜರಾತ್ ಹೈಕೋರ್ಟ್ ತೀರ್ಪುನ್ನು ತಡೆ ನೀಡಿ ಯಾಕೆ ರಾಹುಲ್ ಗಾಂಧಿ ಯವರಿಗೆ ಕಟು ಶಿಕ್ಷೆ ಎಂದು ಪ್ರಶ್ನೆಯನ್ನು ಕೇಳಿದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ಇದು ರಾಹುಲ್ ಗಾಂಧಿ ಹಾಗು ವಯಾನಾಡ್ ಕ್ಷೇತ್ರದ ಜನತೆಗೆ ಮಾಡಿದ ಶಿಕ್ಷೆ ಯಾಕೆ ಇಷ್ಟು ಕಠೋರ ಎಂದು ಪ್ರಶ್ನಿಸಿದೆ ಪುನಃ ತುಗಲಖ್ ರಸ್ತೆಯಲ್ಲಿ ಇರುವ ಮನೆಯನ್ನು ಪುನ ನೀಡುವ ನಿರ್ಧಾರವನ್ನು ಸ್ವಾಗತಿಸುವುದಾಗಿ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಸ್ವಾಗತಿಸಿದ್ದಾರೆ ಇದು ನ್ಯಾಯಾಲಯವನ್ನು,ಐ ಟಿ,ಇ ಡಿ, ಸಿ ಬಿ ಐ,ಮತ್ತಿತರರು ಸಂಸ್ಥೆಗಳನ್ನು ಹತೋಟಿಯಲ್ಲಿಟ್ಟು ವಿರೋಧ ಪಕ್ಷದ ನಾಯಕರ ಮತ್ತು ವಿರೋಧಿಗಳನ್ನು ಮಟ್ಟಹಾಕುವ ಪ್ರಧಾನಿ ನರೇಂದ್ರ ಮೋದಿ ಹಾಗು ಭಾರತೀಯ ಜನತಾ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು ಸತ್ಯಕ್ಕೆ ಸಂದ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ

ಅದೇ ರೀತಿ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿರುವುದು ಖುಷಿ ಕೊಟ್ಟಿದೆ, ಇದರಿಂದ‌ ಎಲ್ಲರಲ್ಲಿಯೂ ಹರ್ಷ ಮೂಡಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ‌ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ಮಾದ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ರಾಜ್ಯ