
ಮಣಿಪುರ ಹಿಂಸಾಚಾರ ಪ್ರಕರಣಕ್ಕೆ ಸುಳ್ಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. ಇಂದು ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಸೋಸಿಯೇಷನ್ ವತಿಂಯಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಸೋಸಿಯೇಷನ್ ಸುಳ್ಯ ತಾಲೂಕು ನೇತೃತ್ವದಲ್ಲಿ ಸುಳ್ಯ ತಾಲೂಕಿನ ಎಲ್ಲಾ ಚರ್ಚ್ ಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿತು.


ಸುಳ್ಯದ ಖಾಸಗಿ ಬಸ್ ನಿಲ್ದಾಣದಿಂದ ಆರಂಭಗೊಂಡ ಮೌನ ಮೆರವಣಿಗೆ ಸುಳ್ಯ ತಾಲೂಕು ಕಚೇರಿಯ ವರೆಗೆ ಸಾಗಿ ಎದುರುಗಡೆ ಪ್ರತಿಭಟನೆ ನಡೆಸಿದರು
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಧರ್ಮಗುರು ಫಾ.ಆದರ್ಶ್ ಜೋಸೆಫ್ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸೆಯನ್ನು ಸಮರ್ಥಿಸುವ ಕೆಲಸ ಆಗುತ್ತಿದ್ದು , ಧಕ್ಷಿಣ ಭಾರತದಿಂದ ಹಿಡಿದು ಉತ್ತರ ಭಾರತದ ವರೆಗೆ ಹಿಂಸೆಯನ್ನು ಪ್ರತಿಭಟಿಸಬೇಕಾಗಿದೆ ಮಣಿಪುರದಲ್ಲಿ ಆದಷ್ಟು ಬೇಗ ಶಾಂತಿ ಪುನಃ ಸ್ಥಾಪನೆ ಆಗಬೇಕು. ಅಲ್ಲಿನ ಅಲ್ಪ ಸಂಖ್ಯಾತರ ಮೇಲೆ ನಡೆಯುವ ದೌರ್ಜನ್ಯ ಕೊನೆಯಾಗಬೇಕು ಕೇಂದ್ರ ಸರಕಾರ ಜವಬ್ಧಾರಿಯುತ ಸ್ಥಾನದಲ್ಲಿ ನಿಂತು ಜನಸಾಮಾನ್ಯರ ರಕ್ಷಣೆಗೆ ಮುಂದಾಗಬೇಕು , ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲಾಗದ ಮಣಿಪುರದ ಸರಕಾರವನ್ನು ವಿಸರ್ಜಿಸ ಬೇಕು ಎಂದು ಒತ್ತಾಯಿಸಿದರು

ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿ ಬಡತನದಲ್ಲಿ ಬೆಳೆದು ಬಂದ ಕುಕೀ ಜನಾಂಗದ ಮೇಲಿನ ದೌರ್ಜನ್ಯ, ಅಲ್ಲಿನ ಮಹಿಳೆಯರ ಮೇಲಾದ ಆತ್ಯಾಚಾರ ಭಾರತ ಮಾತೆಯ ಮೇಲಿನ ಅತ್ಯಚಾರ ಮಾಡಿದಂತೆ ಹೆಣ್ಣನ್ನು ಪೂಜಿಸುವ ಭಾರತದ ಮಣ್ಣಿನಲ್ಲಿ ಹೆಣ್ಣಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಬಂದಿರುವುದು ಒಂದು ದುರಂತ ಮಣಿಪುರ ಘಟನೆ ಒಂದು ಷಡ್ಯಂತ್ರದ ಭಾಗ. ರಾಜಕೀಯ ಕಾರಣಕ್ಕಾಗಿ ಮಣಿಪುರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತಿದೆ ,ಈಗಾಗಲೇ 180 ಜನರನ್ನು ಹತ್ಯೆ ಮಾಡಲಾಗಿದೆ, ೩೨೬ ಮಂದಿ ಗಾಯ ಗೊಂಡಿದ್ದಾರೆ, ೨೭ ಚರ್ಚ್ಗಳ ನೆಲಸಮ ಮಾಡಲಾಗಿದೆ, ಕುಕಿ ಜನಾಂಗ ಸಂಸತ್ತಿನಲ್ಕಿ ಶಾಶ್ವತ ಸ್ಥಾನ ಪಡೆಯುತ್ತಾರೆಂದು ಅವರನ್ನು ಹತ್ಯೆ ನಡೆಸುವ ಹುನ್ನಾರ ಕಂಡು ಬರುತ್ತಿದೆ ಎಂದು ಹೇಳಿದರು. ಮಣಿಪುರದಲ್ಲಿ ನಿರಾಶ್ರಿತರಾದ ಜನರಿಗೆ ಗರಿಷ್ಠ ಬೆಂಬಲ ನೀಡಬೇಕಾಗಿದೆ ಎಂದು ಹೇಳಿದರು.
ಸಿಐಟಿಯು ಮುಖಂಡ ಕೆ.ಪಿ.ಜಾನಿ ಕಲ್ಲುಗುಂಡಿ ಮಾತನಾಡಿ ಇದೊಂದು ವ್ಯವಸ್ಥಿತ ಷಡ್ಯಂತ್ರದ ಭಾಗ ಎಂದು ಹೇಳಿದರು.ಬಳಿಕ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು

ಧರ್ಮಗುರುಗಳಾದ ಫಾ.ವಿಕ್ಟರ್ ಡಿಸೋಜಾ, ಫಾ.ಕ್ರಿಸ್ಟಿ ಪುತಿಯಕುನ್ನೇಲ್, ಕರ್ನಾಟಕ ಜೀರೋ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ (ಕೆಎಸ್ಎಂಸಿಎ) ಕೇಂದ್ರ ಸಮಿತಿ ಅಧ್ಯಕ್ಷ ಬಿಟ್ಟಿ ಬಿ ನೆಡುನಿಲಂ, ವಲಯ ಸಮಿತಿ ಅಧ್ಯಕ್ಷ ಬಿಜು ಅಗಸ್ಟಿನ್, ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಜೋಸೆಫ್ ಎನ್.ವಿ, ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ, ಕೆ.ಎಸ್.ಉಮ್ಮರ್, ಪ್ರಮುಖರಾದ ಮಹಮ್ಮದ್ ಕುಂಞಿ ಗೂನಡ್ಕ, , ರೋಹನ್ ಪೀಠರ್, ವಿನೋದ್ ಲಸ್ರಾದೋ,ಜೂಲಿಯಾನ ಕ್ರಾಸ್ತಾ, ನವೀನ್ ಮಚಾದೋ ಮೊದಲಾದವರಿದ್ದರು

