
ಕರಾವಳಿ ಕೊಡಗು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ವರಣನ ಅರ್ಭಟ ಮುಂದುವರೆದಿದ್ದು ನಾಳೆ ಸುಳ್ಯ ತಾಲೋಕಿನಾಧ್ಯಂತ ಅಂಗನವಾಡಿ ,ಶಾಲೆ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಜುಲೈ 25 ರಂದು ಬಾರೀ ಮಳೆಯಾಗುವ ಸಂಭವವಿದ್ದು ನದಿ ತೊರೆ ಹೊಳೆ ಮುಂತಾದ ಅಪಾಯಕಾರಿ ಸ್ಥಳಗಳ ಬಳಿ ಮಕ್ಕಳು ತೆರಳದಂತೆ ಪೋಷಕರು ನಿಗಾ ವಹಿಸುವಂತೆ ತಹಶೀಲ್ದಾರ್ ಪ್ರಕಟಣೆ ಹೊರಡಿಸಿದ್ದಾರೆ.
